Spread the love

ಹಿರಿಯಡ್ಕ: ಡಿಸೆಂಬರ್ 8 (ಹಾಯ್ ಉಡುಪಿ ನ್ಯೂಸ್) ಕೆಲಸಕ್ಕೆಂದು ಮನೆಯಿಂದ ತೆರಳಿದ ಮಹಿಳೆ ಆನಂತರ ಕಾಣೆಯಾಗಿದ್ದಾರೆ ಎಂದು ಆಕೆಯ ಪತಿ ಪೊಲೀಸರಿಗೆ ದೂರು ನೀಡಿದ್ದಾರೆ.

ಅಂಜಾರು ಗ್ರಾಮದ, ಕಾಜಾರಗುತ್ತು, 5 ಸೆಂಟ್ಸ್  ಎಂಬಲ್ಲಿನ ನಿವಾಸಿಯಾದ  ಸಂತೋಷ ಪೂಜಾರಿ ಎಂಬವರ  ಪತ್ನಿ ಸ್ವಾತಿ   ಪೂಜಾರಿ, (32 ) ರವರು ಓಂತಿಬೆಟ್ಟು ಬಾಲಾಜಿ ತೆಂಗಿನೆಣ್ಣೆ  ಪ್ಯಾಕ್ಟರಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 06-12-2022 ರಂದು ಬೆಳಗ್ಗೆ 09:00 ಗಂಟೆ ಸಮಯಕ್ಕೆ ಕೆಲಸಕ್ಕೆ  ಹೋಗುವುದಾಗಿ ತನ್ನ ತಾಯಿಯ ಬಳಿ ಹೇಳಿ ಹೋದವರು ಕೆಲಸಕ್ಕೆ ಹೋಗದೇ / ಮನೆಗೂ  ಬಾರದೇ   ಕಾಣೆಯಾಗಿರುತ್ತಾರೆ ಎಂದು ಸಂತೋಷ ಪೂಜಾರಿ (42) ರವರು ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್‌ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

error: No Copying!