ಉಡುಪಿ : ದಿನಾಂಕ 4-12-2022(ಹಾಯ್ ಉಡುಪಿ ನ್ಯೂಸ್) ಸಾಲ ವಸೂಲಿ ಬಗ್ಗೆ ಮಾತನಾಡಲು ಬಂದ ಬ್ಯಾಂಕ್ ನೌಕರನಿಗೆ ಸಾಲಗಾರ ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿದ ಘಟನೆ ಉಡುಪಿ ಯಲ್ಲಿ ನಡೆದಿದೆ.
ಬೊಮ್ಮರಬೆಟ್ಟು ಗ್ರಾಮದ ಕೊಂಡಾಡಿ ಭಜನೆ ಕಟ್ಟೆ ನಿವಾಸಿ ಪ್ರಸಾದ್ (34) ಇವರು SCDCC ಬ್ಯಾಂಕ್ ಉದ್ಯೋಗಿ ಯಾಗಿದ್ದು ದಿನಾಂಕ 03/12/2022 ರಂದು ಬೆಳಿಗ್ಗೆ 10:30 ಗಂಟೆಗೆ ಉಡುಪಿ ತಾಲೂಕು ಪುತ್ತೂರು ಗ್ರಾಮದ ಅಂಬಾಗಿಲು ಗೋಪಾಲಪುರದ ಬ್ಯಾಂಕ್ ನ ಸಾಲಗಾರ ನವೀನ್ ಕುಮಾರ್ ಅಂಬಾಗಿಲು ,ಗೋಪಾಲಪುರ ಎಂಬವರ ಮನೆಗೆ SCDCC ಬ್ಯಾಂಕ್ ನ ಸಿಬ್ಬಂಧಿಗಳೊಂದಿಗೆ ಸಾಲ ವಸೂಲಾತಿ ಬಗ್ಗೆ ಮಾತನಾಡಲು ಹೋಗಿದ್ದು ಆಗ ನವೀನ್ ಕುಮಾರ್ ಏಕಾಏಕಿ ಸಾಲ ಕಟ್ಟುವುದಿಲ್ಲ,ನನಗೆ ಸಂಬಂಧವಿಲ್ಲ, ಮನೆಗೆ ಯಾಕೆ ಬಂದಿದ್ದು‘ಎಂದು ಅವಾಚ್ಯ ಶಬ್ದಗಳಿಂದ ಬೈದು ಪ್ರಸಾದ್ ರವರ ಎಡಕೆನ್ನೆಗೆ ಹೊಡೆದಿದ್ದಲ್ಲದೇ ಅಲ್ಲಿಯೇ ಇದ್ದ ಮರದ ರೀಪಿನಿಂದ ಪ್ರಸಾದ್ ರ ತಲೆಗೆ ಹೊಡೆದು ಕೊಲೆ ಮಾಡಲು ಪ್ರಯತ್ನಿಸಿದ್ದು, ಆ ಸಮಯ ಪ್ರಸಾದ್ ರವರು ತಪ್ಪಿಸಿಕೊಂಡಿದ್ದು , ನವೀನ್ ಕುಮಾರ್ ನು ಅಲ್ಲಿದ್ದವರನ್ನು ಉದ್ದೇಶಿಸಿ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿದ್ದಾನೆಂದು ಬ್ಯಾಂಕ್ ಸಿಬ್ಬಂದಿ ದೂರು ನೀಡಿದ್ದು ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.