ಹೆಬ್ರಿ: ದಿನಾಂಕ 3-12-2022 ( ಹಾಯ್ ಉಡುಪಿ ನ್ಯೂಸ್) ಬಸ್ಸು ಚಾಲಕರೋರ್ವರು ಸಾರ್ವಜನಿಕ ಸೇವೆಯಲ್ಲಿರುವಾಗ ವ್ಯಕ್ತಿಯೋರ್ವ ಮಾರಕ ಆಯುಧ ತೋರಿಸಿ ಜೀವ ಬೆದರಿಕೆ ಹಾಕಿರುವ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹೆಬ್ರಿ ತಾಲೂಕು, ಬೆಳಂಜೆ ಗ್ರಾಮದ ಹಣೆಗೋಡು ನಿವಾಸಿ ನವೀನ್ ನಾಯ್ಕ್ (25) ಇವರು KA-52-A-1905 ನೇ ಎಕ್ಸ್ ಪ್ರೆಸ್ ಬಸ್ಸಿನಲ್ಲಿ ಚಾಲಕರಾಗಿದ್ದು. ದಿನಾಂಕ 01/12/2022 ರಂದು ಸಂಜೆಯ ಸಮಯ ಬಸ್ಸಿನಲ್ಲಿ ಪ್ರಯಾಣಿಕರನ್ನು ಕುಳ್ಳಿರಿಸಿಕೊಂಡು ಬ್ರಹ್ಮಾವರದಿಂದ ಹೆಬ್ರಿಗೆ ಬರುತ್ತಿದ್ದು. ಅವರು ರಾತ್ರಿ 7:05 ಗಂಟೆಗೆ ಕಳ್ತೂರು ಗ್ರಾಮದ ಹೈಸ್ಕೂಲ್ ಶಾಲೆಯ ಬಳಿ ತಲುಪಿದಾಗ ಬಸ್ಸಿನ ಹಿಂದುಗಡೆಯಿಂದ ದಿನಕರ ಪೂಜಾರಿ ಎಂಬವನು ತನ್ನ KA-19-M.-638 ನೇ ಮಾರುತಿ ಸುಜುಕಿ 800 ಕಾರನ್ನು ಚಲಾಯಿಸಿಕೊಂಡು ಬಂದು ಬಸ್ಸನ್ನು ಓವರ್ ಟೇಕ್ ಮಾಡಿ ಕಾರನ್ನು ಬಸ್ಸಿಗೆ ಅಡ್ಡ ಇಟ್ಟು ಕಾರಿನಿಂದ ಕೆಳಗೆ ಇಳಿದು ಬಸ್ಸಿನ ಚಾಲಕನ ಡೋರ್ ನ ಬಳಿ ಬಂದು ಆತನ ಕೈಯಲ್ಲಿದ್ದ ಚೂರಿಯನ್ನು ನವೀನ್ ನಾಯ್ಕ್ ಗೆ ತೋರಿಸಿ ಅವಾಚ್ಯ ಶಬ್ದದಿಂದ ಬೈದು ಬಸ್ಸಿನಿಂದ ಕೆಳಗೆ ಇಳಿ ಎಂದು ಜೋರು ಮಾಡಿದಾಗ ನವೀನ್ ನಾಯ್ಕ್ ಬಸ್ಸಿನಿಂದ ಕೆಳಗೆ ಇಳಿದಿದ್ದು ಅಗ ದಿನಕರ ಪೂಜಾರಿಯು ನವೀನ್ ನಾಯ್ಕ್ ಗೆ ನಿನಗೆ ಸೈಡ್ ಕೊಡಲು ಅಗುವುದಿಲ್ಲವೇ ಎಂದು ಹೇಳಿ ಅತನ ಕೈಯಲ್ಲಿದ್ದ ಚೂರಿಯನ್ನು ತೋರಿಸಿ ಇನ್ನು ಮುಂದೆ ಹೀಗೆಯೇ ಮಾಡಿದರೆ ನಿನ್ನನ್ನು ಇದೇ ಚೂರಿಯಿಂದ ಕೊಂದು ಹಾಕುತ್ತೇನೆಂದು ಜೀವ ಬೆದರಿಕೆ ಹಾಕಿರುತ್ತಾನೆ ಎಂದು ನವೀನ್ ನಾಯ್ಕ್ ತನ್ನ ದೂರಿನಲ್ಲಿ ತಿಳಿಸಿದ್ದಾರೆ.
ಅಗ ಅಲ್ಲಿಗೆ ಬಸ್ಸಿನ ನಿರ್ವಾಹಕ ಹರೀಶ್ ಪೈ ಇವರು ಬಂದದ್ದನ್ನು ದಿನಕರ ಪೂಜಾರಿ ನೋಡಿ ಕಾರನ್ನು ಚಲಾಯಿಸಿಕೊಂಡು ಹೆಬ್ರಿ ಕಡೆಗೆ ಹೋಗಿರುತ್ತಾನೆ ಎಂದು ಪೊಲೀಸರಿಗೆ ನೀಡಿದ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.