Spread the love

ಹನೂರು : ನವೆಂಬರ್ 28 ( ಹಾಯ್ ಉಡುಪಿ ನ್ಯೂಸ್) ಇಂದಿನ ಪ್ರಪಂಚದಲ್ಲಿ ಡಿಜಿಟಲ್ ಮಾದ್ಯಮವು ಪ್ರಮುಖ ಪಾತ್ರವಹಿಸುತ್ತದೆ ಅಲ್ಲದೆ ಸಮಾಜದ ಅಭಿವೃದ್ಧಿಯಲ್ಲಿ ಪತ್ರಿಕಾರಂಗ ಜನರಲ್ಲಿ ಅರಿವು ಮೂಡಿಸುವಲ್ಲಿ ಮಹತ್ವದ ಪಾತ್ರವಹಿಸುತ್ತದೆ ಇದು ಹೆಮ್ಮೆಯ ವಿಷಯ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ತಿಳಿಸಿದರು
ಇದೇ ಭಾನುವಾರದಂದು ಹನೂರು ಪಟ್ಟಣದ ಬೆಟ್ಟಳ್ಳಿ ಮಾರಮ್ಮ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಪತ್ರಕರ್ತರ ಸಂಘ ಬೆಳಗಾವಿ(ರಿ) ಹನೂರು ತಾಲೂಕು ಘಟಕದ ಉದ್ಘಾಟನೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದೇ ಸಮಯದಲ್ಲಿ ಮಾತನಾಡಿದ ಅವರು ಮಾಧ್ಯಮಗಳು ಸಮಾಜದಲ್ಲಿ ಜನರಿಗೆ ಮಾಹಿತಿ ನೀಡುವ ಮೂಲಕ ಅತ್ಯಂತ ಪ್ರಭಾವ ಶಾಲಿಯಾಗಿ ಜನರ ಮದ್ಯೆ ಇರುವುದರಿಂದ ಜನರ ಸಮಸ್ಯೆಗಳನ್ನು ನೇರವಾಗಿ ಬಗೆಹರಿಸಬಹುದು ಅಲ್ಲದೆ ಸಂವಿಧಾನದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಜೊತೆ ಪತ್ರಿಕಾ ರಂಗವು ಸಹ ಮಹತ್ವವನ್ನು ಪಡೆದಿದೆ. ಇಲ್ಲಿನ ಕರ್ನಾಟಕ ಪತ್ರಕರ್ತರ ಸಂಘ ಸಮಾಜ ಮುಖಿ ಕಾರ್ಯಕ್ರಮದಲ್ಲಿ ತೊಡಗಿರುವುದು ಶ್ಲಾಘನೀಯ ಎಂದು ತಿಳಿಸಿದ್ದಾರೆ.

ಪತ್ರಕರ್ತರ ಸಂಘದ ಉದ್ಘಾಟನೆ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಹದೇಶ್ವರಬೆಟ್ಟ ಶ್ರೀ ಸಾಲೂರು ಬೃಹನ್ ಮಠದ
ಶ್ರೀ ಶಾಂತ ಮಲ್ಲಿಕಾರ್ಜುನ ಶ್ರೀಗಳು ಮಾತಾನಾಡಿ ಉತ್ತರ ಕರ್ನಾಟಕದಿಂದ ದಕ್ಷಿಣ ಕರ್ನಾಟಕದತ್ತ ಪಾದರ್ಪಣೆ ಮಾಡಿರುವ ಕರ್ನಾಟಕ ಪತ್ರಕರ್ತರ ಸಂಘ ಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿ ಪ್ರಪ್ರಥಮವಾಗಿ ಉದ್ಘಾಟನೆ ಆಗುತ್ತಿರುವುದು ನಮ್ಮೆಲ್ಲರಿಗೂ ಸಂತಸಕರದ ವಿಷಯವಾಗಿದೆ ಸಂಘದ ದೇಯ್ಯೋದ್ದೇಶಗಳನ್ನು ಗಮನಿಸಿದರೆ ಈ ಸಂಘವು ಪತ್ರಿಕಾ ವಿತರಕರು
ಸೇರಿದಂತೆ ಪತ್ರಿಕಾ ವರಧಿಗಾರರಿಗೂ ವಿಮಾ ಸೌಲಭ್ಯ ಸೇರಿದಂತೆ ಇನ್ನಿತರ ಸವಲತ್ತುಗಳನ್ನು ಪ್ರತಿಯೊಬ್ಬ ಸದಸ್ಯನಿಗೂ ನೀಡಿ ಅವರ ಕುಟುಂಬಕ್ಕೆ ಸಾಕಷ್ಟು ಭದ್ರತೆ ಸೌಲಭ್ಯಗಳು ದೊರೆಯುತ್ತಿರುವುದು ಪತ್ರಿಕಾ ರಂಗದ ಬಳಗಕ್ಕೆ ಒಳ್ಳೆಯ ಬೆಳವಣಿಗೆ ಎಂದು ಆಭಿಪ್ರಾಯ ಪಟ್ಟರು.
ನಂತರ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ಪತ್ರಿಕೆ ಸಂಘದ ರಾಜ್ಯಾಧ್ಯಕ್ಷ ಶ್ರೀ ಮುರುಗೇಶ್ ಶಿವಪೂಜಿ ಅವರು ಕರ್ನಾಟಕ ಪತ್ರಕರ್ತರ ಸಂಘವು ದೆಹಲಿಯ ಇಂಡಿಯನ್ ಜರ್ನಲಿಸ್ಟ್ ಯೂನಿಯನ್ ಅಡಿಯಲ್ಲಿ ಸದಸ್ಯತ್ವವನ್ನು ಹೊಂದಿದ್ದು
ರಾಷ್ಟ್ರ ಮಟ್ಟದಲ್ಲಿ ಸಂಘ ಗುರುತಿಸಿಕೊಂಡಿದೆ ,ನಮ್ಮ ಸಂಘದಲ್ಲಿ ಸದಸ್ಯತ್ವವನ್ನು ತೆಗೆದುಕೊಂಡ ಸದಸ್ಯರುಗಳಿಗೆ ಅಂದರೆ ಪತ್ರಿಕ ವಿತರಕ ,ಪತ್ರಿಕ ಏಜೆಂಟ್ ,ಪತ್ರಿಕಾ ವರದಿಗಾರ ಹಾಗೂ ಪತ್ರಿಕ ಕಚೇರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೂ ಸಹ 4 ಲಕ್ಷ ರೂ ಅಪಘಾತ ವಿಮೆಯ ಸಾಮಾಜಿಕ ಭದ್ರತೆ ಸೌಲಭ್ಯವಿದೆ ಸುಮಾರು ಎಂಟು ಜನ ಟ್ರಸ್ಟಿಗಳು ಸೇರಿಕೊಂಡು ಒಂದು ನಿಧಿಯನ್ನು ಸ್ಥಾಪಿಸಿ ಸದಸ್ಯತ್ವ ಪಡೆದ ಸದಸ್ಯರುಗಳಿಗೆ ಆಕಸ್ಮಿಕ‌ ದುರಂತಗಳು ಸಂಭವಿಸಿದ್ದಲ್ಲಿ ನಿಧಿಯ ಹಣವನ್ನು ವಿನಿಯೋಗಿಸಲಾಗುತ್ತಿದೆ ಆಲ್ಲದೆ ಸಮಾಜದಲ್ಲಿ ಸಂಘಟನೆಗಳು ಎಷ್ಟು ಇದೆ ಎಂಬುದು ಮುಖ್ಯವಲ್ಲ ಸಂಘಟನೆಗಳಿಂದ ಸದಸ್ಯರಿಗೆ ಏನು ಭದ್ರತೆ ಸೌಲಭ್ಯ ದೊರೆಯುತ್ತದೆ ಎಂಬುದೇ ಮುಖ್ಯ ಎಂದು ತಿಳಿಸಿದರು
ಇದೇ ವೇಳೆ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ರಾಜಕೀಯ‌ಕ್ಷೇತ್ರದಲ್ಲಿ ಮರಗದಮಣಿ,ಸಮಾಜಸೇವೆ ಅಡಿಯಲ್ಲಿ ಕೃಷ್ಣೇಗೌಡ
ಪಿ ಎಚ್ ಡಿ ಪದವೀಧರ ಡಾ‌.ಚಂದ್ರಪ್ಪ ಪರಿಸರ ಪ್ರೇಮಿ ವಕೀಲ ವೆಂಕಟೇಶ್ , ನರ್ಗಿಸ್ ಆಲಿಖಾನ್ ಸೇರಿದಂತೆ ಸ್ವಸಹಾಯ ಸಂಘದ ಮಹಿಳೆಯರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಇತ್ತೀಚಿಗೆ ಜಿಲ್ಲಾ ಹಿರಿಯ ಪತ್ರಕರ್ತ ರಹಮಾನ್ ನಿಧನದ ಹಿನ್ನೆಲೆ ಒಂದು ನಿಮಿಷಗಳ ಕಾಲ ಮೌನಚರಣೆ ನಡೆಸಲಾಯಿತು.

ಕಾರ್ಯಕ್ರಮಕ್ಕೂ ಮುನ್ನ ಸಾಲೂರುಶ್ರೀಗಳು ಜೆಡಿಎಸ್ ರಾಜ್ಯ ಉಪಾದ್ಯಕ್ಷ ಮಂಜುನಾಥ್ ಕಚೇರಿ ಉದ್ಘಾಟಿಸಿದರು.

ಈ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಚಂದ್ರಮ್ಮ ಉಪಾಧ್ಯಕ್ಷ ಗಿರೀಶ್ ಸದಸ್ಯರಾದ ಹರೀಶ್,ಮಹೇಶ್ ,
ಮಹೇಶ್ ನಾಯ್ಕ್ ,ಮುಮ್ತಾಜ್ ಭಾನು, ಡಿವೈಎಸ್ಪಿ ಮಹಾನಂದ್ ಪೊಲೀಸ್ ಇನ್ಸ್ಪೆಕ್ಟರ್
ಸಂತೋಷ್ ಕಶ್ಯಪ್ ,ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಜಾವಾದ್ ಅಹಮದ್ , ಮುಖಂಡರಾದ ಕೊಪ್ಪಾಳಿಮಹದೇವ್ , ಮಂಗಲ ಪುಟ್ಟರಾಜು ಪ್ರಜಾಕೀಯ ಮುಖಂಡ ನಾಗರಾಜ್ , ಪಕ್ಷೇತರ ಆಭ್ಯರ್ಥಿ ಮುಜಾಮೀಲ್ ಪಾಷಾ, ರೈತ ಸಂಘದ ಅಧ್ಯಕ್ಷರಾದ
ಗೌಡೇಗೌಡ,ಚಂಗಡಿ ಕರಿಯಪ್ಪ ಹಿರಿಯ ಪತ್ರಕರ್ತರಾದ ವೆಂಕಟೇಗೌಡ ರೂಪೇಶ್ ಕುಮಾರ್ ,ಪತ್ರಿಕಾ ಸಂಪಾದಕರಾದ
ನಾಗೇಶ್ ,ಆಂತಾರ್ಯ ಸಂಪಾದಕ ಮಹಾದೇವಯ್ಯ ವರದಿಗಾರರಾದ ರವಿ ಹಂಚ್ಯಾ, ಪತ್ರಿಕಾ ಸಂಪಾದಕ
ಹೆಚ್ಎಂ ಕೀರ್ತಿಕೇಶ್ವರ್ ,
ಆಮ್ ಆದ್ಮೀ ಪಕ್ಷದ ಮುಖಂಡ ನಾಗೇಂದ್ರ ,ಪ್ರಸನ್ನ ಕುಮಾರ್ ತೆಳ್ಳನ್ನೂರು, ಸೇರಿದಂತೆ ಇನ್ನಿತರರು ಹಾಜರಿದ್ದರು

error: No Copying!