ಮಣಿಪಾಲ: ದಿನಾಂಕ 29-11-2022(ಹಾಯ್ ಉಡುಪಿ ನ್ಯೂಸ್) ದ್ವಿಚಕ್ರ ವಾಹನದಲ್ಲಿ ಅಪಾಯಕಾರಿ ವ್ಹೀಲಿಂಗ್ ನಡೆಸಿದ ಯುವಕನ ಮೇಲೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮಣಿಪಾಲ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪನಿರೀಕ್ಷಕರಾದ ಶೀನ ಸಾಲಿಯಾನ್ ರವರು ದಿನಾಂಕ 27-11-2022 ರಂದು ಠಾಣಾ ಸಿಬ್ಬಂದಿಯವರೊಂದಿಗೆ ಸಂಜೆಯ ಸಮಯ ಸುಮಾರು 5:30 ಗಂಟೆಗೆ ಶಿವಳ್ಳಿ ಗ್ರಾಮದ ಬ್ರಿಡ್ಜ್ ಬಳಿ ಸಂಜೆಯ ಗಸ್ತು ಕರ್ತವ್ಯದಲ್ಲಿರುವಾಗ ಬ್ರಿಡ್ಜ್ ನ ಮೇಲ್ಗಡೆಯಲ್ಲಿ KA 20 V 7107 YAMAHA FZ 16 ಮೋಟಾರ್ ಸೈಕಲ್ ಸವಾರ ತನ್ನ ಮೋಟಾರು ಸೈಕಲನ್ನು ಮಣಿಪಾಲದ ಕಡೆಯಿಂದ ಹಾವಂಜೆ ಕಡೆ ವ್ಹೀಲಿಂಗ್ ಮಾಡುತ್ತಾ ಮೋಟಾರು ಸೈಕಲಿನ ಮುಂದಿನ ಚಕ್ರವನ್ನು ಮೇಲ್ಗಡೆಗೆ ಎತ್ತಿ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ದುಡುಕುತನ ಹಾಗು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದಿದ್ದು, ಪೊಲೀಸರು ಆತನಲ್ಲಿ ಮೋಟಾರು ಸೈಕಲನ್ನು ನಿಲ್ಲಿಸಲು ಸೂಚಿಸಿದಾಗ ನಿಲ್ಲಿಸದೇ ಪರಾರಿಯಾಗಿರುತ್ತಾನೆ ಎಂದು ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.