- ಉಡುಪಿ: ನವೆಂಬರ್ 27(ಹಾಯ್ ಉಡುಪಿ ನ್ಯೂಸ್) ಉಡುಪಿ ಬಲಾಯಿಪಾದೆ ಬಳಿಯ ಅಂಗಡಿಯೊಂದಕ್ಕೆ ಕಳ್ಳರು ನುಗ್ಗಿ ನಗದು ದೋಚಿದ ಘಟನೆ ನಡೆದಿದೆ.
- ಉಡುಪಿ ತಾಲೂಕು, ಕೊರಂಗ್ರಪಾಡಿ, ಹೆಗ್ಡೆ ಕಾಂಪೌಂಡ್ ನಿವಾಸಿ ಹೊನ್ನಪ್ಪ ಶಿವಣ್ಣ ಕುಂಬಾರ(32) ಇವರು ಉಡುಪಿ ತಾಲೂಕು 76-ಬಡಗುಬೆಟ್ಟು ಗ್ರಾಮದ ಬಲಾಯಿಪಾದೆ ಮಹಾಲಕ್ಷ್ಮಿ ಕಾಂಪ್ಲೆಕ್ಸ್ ನಲ್ಲಿರುವ ಮಂಜುಶ್ರೀ ಹರ್ಬಲ್ಸ್ ಎಂಬ ಅಂಗಡಿಯನ್ನು ನಡೆಸಿಕೊಂಡಿದ್ದು, ದಿನಾಂಕ 25/11/2022 ರಂದು ರಾತ್ರಿಯ ಸಮಯದಲ್ಲಿ ಯಾರೋ ಕಳ್ಳರು ಅಂಗಡಿಯ ಶೆಟರ ನ್ನು ಮುರಿದು ಒಳಪ್ರವೇಶಿಸಿ, ಆಫೀಸ್‌ನ ಬೀಗ ಮುರಿದು, ಕ್ಯಾಶ್ ಡ್ರಾವರಿನ ಲಾಕ್ ಅನ್ನು ಯಾವುದೋ ಆಯುಧದಿಂದ ಮುರಿದು ಅದರ ಒಳಗಿದ್ದ ರೂಪಾಯಿ 46,000/- ಹಣವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ .