ಉಡುಪಿ: ನವೆಂಬರ್ 20 (ಹಾಯ್ ಉಡುಪಿ ನ್ಯೂಸ್) ಉಡುಪಿ ನಗರದ ನಿಟ್ಟೂರು ಸ್ತ್ರೀ ಸೇವಾನಿಕೇತನದಲ್ಲಿ ಆಶ್ರಯದಲ್ಲಿದ್ದ ಯುವತಿ ಕಾಣೆಯಾಗಿರುವ ಬಗ್ಗೆ ಪೊಲೀಸರಿಗೆ ದೂರಲಾಗಿದೆ.
ಸ್ತ್ರೀ ಸೇವಾನಿಕೇತನ, ರಾಜ್ಯ ಮಹಿಳಾ ನಿಲಯ, ನಿಟ್ಟೂರು, ಉಡುಪಿ ಇಲ್ಲಿಯ ಅಧೀಕ್ಷಕರಾದ ಲೀಲಾವತಿ ಇವರು ರಾಜ್ಯ ಮಹಿಳಾ ನಿಲಯದ ಸ್ತ್ರೀ ಸೇವಾನಿಕೇತನ ಇದರ ಅಧೀಕ್ಷಕರಾಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು, ಈ ಸಂಸ್ಥೆಯಲ್ಲಿದ್ದ ನಿವಾಸಿ ಕಿರಣ (31) ಎಂಬವರು ಮಾನಸಿಕ ಅಸ್ವಸ್ಥರಾಗಿದ್ದು, ದಿನಾಂಕ 19/11/2022 ರಂದು ಬೆಳಿಗ್ಗೆ 10:07 ಗಂಟೆಗೆ ಸಂಸ್ಥೆಯಿಂದ ತಪ್ಪಿಸಿಕೊಂಡು ಕಾಣೆಯಾಗಿದ್ದು, ಆಸುಪಾಸು ಎಲ್ಲಾ ಕಡೆ ಹುಡುಕಾಡಿದರೂ ಈವರೆಗೆ ಪತ್ತೆಯಾಗಿಲ್ಲ ಎಂದು ಲೀಲಾವತಿಯವರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಹೆಂಗಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.