ಬೆಳಗಾವಿ: ನವೆಂಬರ್ 20 (ಹಾಯ್ ಉಡುಪಿ ನ್ಯೂಸ್) ಗಡಿನಾಡು ಬೆಳಗಾವಿಯ ಸುಂದರ ಪರಿಸರದಲ್ಲಿ ” ಪರ್ಯಾಯ” ಚಲನಚಿತ್ರದ ಚಿತ್ರೀಕರಣ ಯಶಸ್ವಿಯಾಗಿ ಮುಕ್ತಾಯಗೂಂಡಿದೆ.
ಮಮತಾ ಕ್ರಿಯೇಷನ್ ಬ್ಯಾನರ್ ನಲ್ಲಿ ಮುರುಗೇಶ್ ಬಿ ಶಿವಪೂಜಿ , ರಾಜಕುಮಾರ್, ಶಿವಾನಂದ ಇವರ ಸಹಭಾಗಿತ್ವದಲ್ಲಿ “ಪರ್ಯಾಯ ನಿರ್ಮಾಣವಾಗಿದ್ದು , ರಮಾನಂದ ಮಿತ್ರ ನಿರ್ದೇಶನದಲ್ಲಿ ಚಲನಚಿತ್ರ ಮೂಡಿಬಂದಿದೆ. ಈ ಚಲನಚಿತ್ರದ ಚಿತ್ರೀಕರಣ ಬೆಳಗಾವಿ ಸುತ್ತಮುತ್ತಲಿನ ಸುಂದರ ತಾಣಗಳಲ್ಲಿ ಚಿತ್ರೀಕರಣಗೂಂಡಿದೆ.
ಬದುಕಿನ ಹಲವು ಅಯಾಮಗಳನ್ನು ಹಾಸ್ಯ ಮತ್ತು ವಾಸ್ತವಿಕತೆಯ ನೆಲೆಯಲ್ಲಿ ಕಟ್ಟಿಕೊಡುವ ಕಥಾ ಹಂದರವುಳ್ಳ ಪರ್ಯಾಯ ಚಲನಚಿತ್ರದ ಛಾಯಾಗ್ರಹಣದ ಜವಾಬ್ದಾರಿಯನ್ನು ರಂಗಸ್ವಾಮಿ ನಿರ್ವಹಿಸಿದ್ದು , ರೋಹನ್ ಕುಬ್ಸದ್ ನಿರ್ಮಾಣ ಮೇಲ್ವಿಚಾರಣೆ ಜವಾಬ್ದಾರಿ ನಿರ್ವಹಿಸಿದ್ದಾರೆ.
ರಾಜಕುಮಾರ್, ಎಂ.ಬಿ.ಶಿವಪೂಜಿ, ರಂಜನ್ ರಾಜ್, ಅರ್ಚನಾ ಶೆಟ್ಟಿ, ,ಪ್ರಿಯಾ ಜಿ ಕೊಠಾರಿ, ಮಹಾನಂದ , , ಕೆ.ಎಂ.ದಿನೇಶ್ ಸಂತೋಷ್ ಮಿರ್ಜಿ, , ಪ್ರವೀಣ್, ರೋಹನ್, ಕೆಂಪರಾಜ್, ಮಂಜುನಾಥ್, ದತ್ತಾತ್ರೇಯ, ಭೀಮಾನಾಯಕ್, ರಘುನಾತ್ ಯಾದವ್, ಇತರ ಕಲಾವಿದರು ಪ್ರಮುಖ ಪಾತ್ರ ದಲ್ಲಿ ನಟಿಸಿದ್ದಾರೆ.