ಹೆಬ್ರಿ: ನವೆಂಬರ್ 17 (ಹಾಯ್ ಉಡುಪಿ ನ್ಯೂಸ್) ಹೆಬ್ರಿ ಗ್ರಾಮದ ಸಾರ್ವಜನಿಕ ರಸ್ತೆಗೆ ಇಬ್ಬರು ವ್ಯಕ್ತಿಗಳು ಕಲ್ಲು ಇಟ್ಟು ರಸ್ತೆ ಸಂಚಾರಕ್ಕೆ ತಡೆ ಒಡ್ಡಿದ ಘಟನೆ ನಡೆದಿದೆ.
ಹೆಬ್ರಿ ತಾಲೂಕು , ಹೆಬ್ರಿ ಗ್ರಾಮದ ಅರ್ಭಿ ಮನೆ ನಿವಾಸಿ ಸುಧೀರ್ ಮಡಿವಾಳ (35) ಇವರ ಮನೆಯ ಕಡೆಗೆ ಹೋಗುವ ಏಳಾಳಿ ರಸ್ತೆಯು ಸಾರ್ವಜನಿಕ ರಸ್ತೆಯಾಗಿದ್ದು. ಇದೇ ರಸ್ತೆಯಲ್ಲಿ ಶಕುಂತಳಾ ಶೆಡ್ತಿ, ಸುಮತಿ ಮಡಿವಾಳ್ತಿ, ವಸಂತ ಶೆಟ್ಟಿ ಮತ್ತು ಅಮ್ಮಣ್ಣಿ ಮಡಿವಾಳ್ತಿ ಎಂಬವರುಗಳು ಇದೇ ರಸ್ತೆಯಲ್ಲಿ ತಮ್ಮ ತಮ್ಮ ಮನೆಗೆ ನಡೆದುಕೊಂಡು ಅಥವಾ ವಾಹನದಲ್ಲಿ ಹೋಗುವ ರಸ್ತೆ ಆಗಿರುತ್ತದೆ. ದಿನಾಂಕ 14/11/2022 ರಂದು ಮದ್ಯಾಹ್ನ 2:00 ಗಂಟೆಗೆ ಶೋದನ್ ಶೆಟ್ಟಿ, ಮತ್ತು ಸ್ವಾಗತ್ ಶೆಟ್ಟಿ ಎಂಬವರು ಸಾರ್ವಜನಿಕ ರಸ್ತೆಗೆ ಹಾನಿ ಮಾಡುವ ಉದ್ದೇಶದಿಂದ ಹಾಗೂ ಯಾರು ರಸ್ತೆಯಲ್ಲಿ ನಡೆದುಕೊಂಡು ಹೋಗದಂತೆ ಮತ್ತು ವಾಹನದಲ್ಲಿ ಹೋಗಲು ಅಗದಂತೆ ಅಡ್ಡಿ ಮಾಡುವ ಉದ್ದೇಶದಿಂದ ರಸ್ತೆಗೆ ಅಡ್ಡವಾಗಿ ಕಲ್ಲನ್ನು ಇಟ್ಟು 3 ಚೀಲದಷ್ಟುವಿರುವ ಗ್ಲಾಸ್ ಪುಡಿಗಳನ್ನು ತಂದು ರಸ್ತೆಯ ಉದ್ದಕ್ಕೂ ಹಾಕಿ ಸಾರ್ವಜನಿಕರು ಸಂಚಾರ ಮಾಡದಂತೆ ಹಾನಿವುಂಟು ಮಾಡಿರುತ್ತಾರೆ. ಅದಲ್ಲದೇ ವಿಚಾರಿಸಿದಾಗ ಕೊಲೆ ಬೆದರಿಕೆ ಹಾಕಿರುತ್ತಾರೆ ಎಂದು ಸುಧೀರ್ ಮಡಿವಾಳ ನೀಡಿದ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ .