ಉಡುಪಿ: ನವೆಂಬರ್ 18 ( ಹಾಯ್ ಉಡುಪಿ ನ್ಯೂಸ್) ಉತ್ತರ ಕರ್ನಾಟಕದ ಕೂಲಿ ಕಾರ್ಮಿಕರೋರ್ವರು ಉಡುಪಿಯಲ್ಲಿ ಕೆಲಸಕ್ಕೆಂದು ಹೋದವರು ಮರಳಿ ಮನೆಗೆ ಬಾರದೆ ಕಾಣೆಯಾಗಿರುವ ಬಗ್ಗೆ ಅವರ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ.
ಕೊಪ್ಪಳ ಜಿಲ್ಲೆ, ಕುಷ್ಟಗಿ ತಾಲೂಕಿನ ಕಳಮಳ್ಳಿ ತಾಂಡ ಎಂಬಲ್ಲಿನ ನಿವಾಸಿ ಮುತ್ತವ್ವ ಚೌವ್ಹಾಣ್ (41) ಇವರು ತನ್ನ ಗಂಡನೊಂದಿಗೆ ಪ್ರಸ್ತುತ ಗುಂಡುಶೆಟ್ಟಿ ಕಂಪೌಂಡ್, ಬೀಡಿನಗುಡ್ಡೆ, ಉಡುಪಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಇದ್ದು ಇವರ ಗಂಡ ಮೇಘಪ್ಪ ಚವ್ಹಾಣ್ (46) ಇವರು ದಿನಾಂಕ 15/11/2022 ರಂದು ಬೆಳಿಗ್ಗೆ 09:00 ಗಂಟೆಗೆ ಉಡುಪಿ ಬೀಡಿನಗುಡ್ಡೆ ಗುಂಡುಶೆಟ್ಟಿ ಕಂಪೌಂಡ್ ಎಂಬಲ್ಲಿಂದ ಕೆಲಸಕ್ಕೆಂದು ಹೋದವರು ವಾಪಾಸು ಮನೆಗೆ ಬಾರದೇ, ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿರುತ್ತಾರೆ ಎಂದು ದೂರು ನೀಡಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಗಂಡಸು ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.