- ಕಾರ್ಕಳ: ನವೆಂಬರ್ 13 (ಹಾಯ್ ಉಡುಪಿ ನ್ಯೂಸ್) ನಿಟ್ಟೆ ಗ್ರಾಮದಲ್ಲಿ ದ್ವಿಚಕ್ರ ವಾಹನದಲ್ಲಿ ಬಂದ ಕಳ್ಳರು ಅಂಗಡಿಯೊಂದರ ಶಟರ್ ಒಡೆದು ಹಣವನ್ನು ಕದ್ದೊಯ್ದಿರುವ ಬಗ್ಗೆ ಪೊಲೀಸರಿಗೆ ದೂರಲಾಗಿದೆ.
- ಕಾರ್ಕಳ ತಾಲೂಕು, ನಿಟ್ಟೆ ಗ್ರಾಮದ ಅಗನೊಟ್ಟು ನಿವಾಸಿ ಸದಾನಂದ ಶೆಟ್ಟಿ (೪೪) ಎಂಬವರು ನಿಟ್ಟೆ ಗ್ರಾಮದ ನಿಟ್ಟೆ ಬಾಬಕ್ಕ ಕಾಂಪ್ಲೆಕ್ಸ್ ನಲ್ಲಿ ಸ್ವಸ್ತಿಕ್ ಎಂಟರ್ ಪ್ರೈಸಸ್ ಎಂಬ ದಿನಸಿ ಅಂಗಡಿಯನ್ನು ಹೊಂದಿದ್ದು ದಿನಾಂಕ 13-11-2022ರಂದು ಬೆಳಿಗ್ಗೆ 4-30 ರ ಸಮಯಕ್ಕೆ ಯಾರೋ ಕಳ್ಳರು ದ್ವಿಚಕ್ರ ವಾಹನದಲ್ಲಿ ಅವರ ಅಂಗಡಿಯ ಬಳಿಗೆ ಬಂದು ಅವರ ಅಂಗಡಿಯ ಶಟರ್ ನ ಬೀಗವನ್ನು ಮುರಿದು ಒಳ ಪ್ರವೇಶಿಸಿ ಅಂಗಡಿಯ ಡ್ರಾವರ್ ಮತ್ತು ದೇವರ ಸ್ಟ್ಯಾಂಡ್ ನಲ್ಲಿ ಇರಿಸಿದ ಡಬ್ಬದಲ್ಲಿ ಇಟ್ಟಿದ್ದ ನಗದು 8,000 ರೂಪಾಯಿಯನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂದು ಸದಾನಂದ ಶೆಟ್ಟಿಯವರು ಪೊಲೀಸರಿಗೆ ದೂರು ನೀಡಿದ್ದು ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.