Spread the love

ಬ್ರಹ್ಮಾವರ : ನವೆಂಬರ್ 13 (ಹಾಯ್ ಉಡುಪಿ ನ್ಯೂಸ್) ರಸ್ತೆ ಕಾಮಗಾರಿ ವೇಳೆ ತುಂಡಾದ ನೀರಿನ ಪೈಪನ್ನು ಕೂಡಲೇ ದುರಸ್ತಿ ಮಾಡದ ವಾಟರ್ ಮೆನ್ ಮೇಲೆ ಸಿಟ್ಟುಗೊಂಡ ಪಂಚಾಯತ್ ಸದಸ್ಯರೋರ್ವರು ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿದ ಬಗ್ಗೆ ದೂರು ದಾಖಲಾಗಿದೆ.

ಜಗದೀಶ ಆಚಾರಿ ಇವರು ಚೇರ್ಕಾಡಿ ಪಂಚಾಯತ್‌ನಲ್ಲಿ ಸುಮಾರು 4 ವರ್ಷದಿಂದ ವಾಟರ್‌ಮೇನ್‌ ಆಗಿ ಕೆಲಸ ಮಾಡಿಕೊಂಡಿದ್ದು  ದಿನಾಂಕ: 12/11/2022 ರಂದು ಮಧ್ಯಾಹ್ನ  3:00 ಗಂಟೆಗೆ ಕನ್ನಾರುವಿನಲ್ಲಿ ರಸ್ತೆ ಕಾಮಾಗಾರಿ ಮಾಡುವ ಸಮಯ ಪೈಪ್‌ ಒಡೆದಿದ್ದು  ಈ ಬಗ್ಗೆ ಪಂಚಾಯತ್‌ ಅಧ್ಯಕ್ಷರು  ಗುತ್ತಿಗೆದಾರರಲ್ಲಿ ಮಾತನಾಡಿ  ನಾಳೆ ದಿನ ಸರಿ ಮಾಡುವ  ಎಂದಿದ್ದು ಆ ನಂತರ ಜಗದೀಶ ಆಚಾರಿ ಮನೆಯಲ್ಲಿರುವಾಗ  ಚೇರ್ಕಾಡಿ ಪಂಚಾಯತ್‌ ಸದಸ್ಯರಾದ ನವೀನ್‌ ಬಂಗೇರರವರು ಜಗದೀಶ ಆಚಾರಿಯವರಿಗೆ ಫೋನ್‌ ಮಾಡಿ ಪೈಪ್‌ಲೈನ್‌ ಹಾಳಾದದ್ದನ್ನು ತಕ್ಷಣ ರಿಪೇರಿ ಮಾಡಲು ಆಗುವುದಿಲ್ಲವೇ  ಮತ್ತೆ ನೀನು ಪಂಚಾಯತ್‌ನಲ್ಲಿ ಏಕೆ ಇರುವುದು , ನಿನ್ನನ್ನು ಕೊಲ್ಲದೇ  ಬಿಡುವುದಿಲ್ಲ  ಈಗ ನೀನು ಪೇತ್ರಿ ಪೇಟೆಗೆ ಬಾ ಎಂದು ಬೆದರಿಕೆ  ಒಡ್ಡಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ದೂರಿದ್ದಾರೆ. 

ಸಂಜೆ 5:10 ಗಂಟೆ ಸಮಾರಿಗೆ  ಪಂಚಾಯತ್‌ನಲ್ಲಿ ಹಾರಿಸಲಾದ ಬಾವುಟವನ್ನು ಇಳಿಸಲು ಪೇತ್ರಿ ಪೇಟೆಯ ಕೃಷ್ಣ ಮಡಿವಾಳ  ಅಂಗಡಿ ಬಳಿ ನಡೆದುಕೊಂಡು  ಹೋಗುವಾಗ ನವೀನ್‌ ಬಂಗೇರ ರವರು ಏಕಾಎಕಿ  ಜಗದೀಶ ಆಚಾರಿಯನ್ನು ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು   ಪೈಪ್‌ಲೈನ್‌ ಹಾಳಾದ ವಿಚಾರದಲ್ಲಿ ಬಾರಿ ಮಾತಾನಾಡುತ್ತೀಯಾ  ಎಂದು ಬೈದು  ಜಗದೀಶ ಆಚಾರಿಯ ಅಂಗಿಯ  ಕಾಲರ್‌ ಪಟ್ಟಿ ಹಿಡಿದು  ಕೈಯಿಂದ ಕೆನ್ನೆಗೆ ಹೊಡೆದು  ಕಾಲಿನಿಂದ ತುಳಿದಿರುತ್ತಾನೆ ಹಾಗೂ ಈ ದಿನ ಬದುಕಿದೀಯಾ  ಮುಂದಕ್ಕೆ  ಈ ರೀತಿ ಪೋನ್‌ನಲ್ಲಿ ಮಾತನಾಡಿದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ  ಎಂದು ಬೆದರಿಕೆ ಹಾಕಿರುತ್ತಾನೆ ಎಂದು ಜಗದೀಶ ಆಚಾರಿಯವರು ತನಗೆ ಆದ ಹಲ್ಲೆಯ ವಿಚಾರವನ್ನು ಪಂಚಾಯತ್‌ ಅದ್ಯಕ್ಷರು ಮತ್ತು ಉಪಾಧ್ಯಕ್ಷರಾದ ಕಿಟ್ಟಪ್ಪ ಅಮೀನ್‌ರವರಿಗೆ ತಿಳಿಸಿದ್ದು  ಅವರು ಜಗದೀಶ ಆಚಾರಿಯವರನ್ನು ಚಿಕಿತ್ಸೆಗಾಗಿ ಬಹ್ಮಾವರ ಸರಕಾರಿ ಆಸ್ಪತ್ರೆಗೆ  ಕರೆದುಕೊಂಡು ಬಂದಾಗ  ಅಲ್ಲಿನ ವೈದ್ಯರು ಪರೀಕ್ಷಿಸಿ ಒಳ ರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ ಎಂದು ಜಗದೀಶ ಆಚಾರಿಯವರು ಪೊಲೀಸರಿಗೆ ನೀಡಿದ ದೂರಿನಲ್ಲಿ ದೂರಿ ಕೊಂಡಿದ್ದಾರೆ.  ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

error: No Copying!