ಉಡುಪಿ: ನವೆಂಬರ್ 12 (ಹಾಯ್ ಉಡುಪಿ ನ್ಯೂಸ್) ಬೈಲೂರು ಶ್ರೀ ನೀಲಕಂಠ ಮಹಾ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಕಳ್ಳರು ಕಾಣಿಕೆ ಡಬ್ಬಿ ಕಳ್ಳತನ ನಡೆಸಿರುವ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
76-ಬಡಗುಬೆಟ್ಟು ಗ್ರಾಮದ ಬೈಲೂರು ಶ್ರೀ ನೀಲಕಂಠ ಮಹಾ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಅಭಿಲಾಶ್ ಕುಂದರ್ (38) ಎಂಬವರು ಅರ್ಚಕನಾಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 29/10/2022 ರಂದು ರಾತ್ರಿಯ ಸಮಯದಲ್ಲಿ ಯಾರೋ ಕಳ್ಳರು ದೈವಸ್ಥಾನದ ಎರಡು ಕಾಣಿಕೆ ಡಬ್ಬಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ನಂತರ ದಿನಾಂಕ 11/11/2022 ರಂದು ರಾತ್ರಿಯ ಸಮಯದಲ್ಲಿ ಯಾರೋ ಕಳ್ಳರು ದೈವಸ್ಥಾನದ ಒಂದು ಸಣ್ಣ ಕಾಣಿಕೆ ಡಬ್ಬವನ್ನು ಕಳವು ಮಾಡಿಕೊಂಡು ಹೋಗಿದ್ದು,ಕಳವಾದ 3 ಡಬ್ಬಗಳಲ್ಲಿ ಒಟ್ಟು ರೂ. 900/- ಹಣ ಇರಬಹುದು ಎಂದು ಕಳ್ಳತನದ ಬಗ್ಗೆ ಪೊಲೀಸರಿಗೆ ದೂರನ್ನು ನೀಡಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.”