ಹೆಬ್ರಿ: ನವೆಂಬರ್ 12( ಹಾಯ್ ಉಡುಪಿ ನ್ಯೂಸ್) ಸರ್ಕಾರಿ ಮಕ್ಕಳ ಹಾಸ್ಟೇಲ್ ಒಂದರ ಅಡುಗೆ ಕೆಲಸದವಳ ಬೇಜವಾಬ್ದಾರಿ ತನಕ್ಕೆ ,ನಿರ್ಲಕ್ಷಕ್ಕೆ ನಾಲ್ಕು ಮಕ್ಕಳ ಮೈ ಮೇಲೆ ಸುಟ್ಟ ಗಾಯಗಳಾಗಿದ್ದು ಮಕ್ಕಳು ಅಷ್ಟರಲ್ಲೇ ಪಾರಾಗಿದ್ದಾರೆ.
ರಾಯಚೂರು ಜಿಲ್ಲೆ,ಮಸ್ತಿ ತಾಲೂಕು,ಸುಂಕಣೂರು ಗ್ರಾಮದ ಕಮಲಾಕ್ಷಿ (35) ಇವರ ಮಗ ಶ್ರೀನಿವಾಸನು ಹೆಬ್ರಿ ಗ್ರಾಮದ ಹೆಬ್ರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 4 ನೇ ತರಗತಿ ವಿಧ್ಯಾಭ್ಯಾಸ ಮಾಡಿಕೊಂಡಿದ್ದು ಹೆಬ್ರಿಯ ಪರಿಶಿಷ್ಟ ವರ್ಗಗಳ
ಕಲ್ಯಾಣ ವಿವೇಕ ನಿಲಯ ಜಿಲ್ಲಾ ಪರಿಶಿಷ್ಟ ಪಂಗಡ ವರ್ಗದ ಕಿರಿಯ ಪ್ರಾಥಮಿಕ ಆಶ್ರಮ ಶಾಲೆಯ ಹಾಸ್ಟೇಲ್ ನಲ್ಲಿ ಉಳಕೊಂಡಿರುತ್ತಾನೆ.
ಶ್ರೀನಿವಾಸನು ದಿನಾಂಕ:09/11/2022 ರಂದು ಶಾಲೆಯು ಮುಗಿದ ಬಳಿಕ ಹಾಸ್ಟೆಲ್ ಗೆ ಬಂದು ಹಾಸ್ಟೇಲ್ ನಲ್ಲಿ ತಿಂಡಿಯನ್ನು ತಿಂದು ಸಂಜೆ ಆಟ ಆಡಿಕೊಂಡಿರುವಾಗ ಸಮಯ ಸುಮಾರು ಸಂಜೆ 04:15 ಗಂಟೆಗೆ ಹಾಸ್ಟೇಲ್ ನಲ್ಲಿ ಅಡುಗೆ ಕೆಲಸ ಮಾಡಿಕೊಂಡಿರುವ ಸಾವಿತ್ರಿ ರವರು ಆಟ ಆಡುತ್ತಿರುವ ಶ್ರೀನಿವಾಸ,ಅಮರೇಶ, ವಿನೋದ್ ಮತ್ತು ಮನೋಜ್ ಬಾವಿಮನೆ ರವರುಗಳನ್ನು ಕರೆದು ಹಾಸ್ಟೇಲ್ ನಲ್ಲಿರುವ ಕಸಕ್ಕೆ ಸ್ಯಾನಿಟೈಸರ್ ಹಾಕಿ ಬೆಂಕಿಯಿಂದ ಸುಡುವಂತೆ ತಿಳಿಸಿರುತ್ತಾರೆ. ಅದರಂತೆ ಮಕ್ಕಳು ಹಾಸ್ಟೇಲ್ ನ ಕಂಪೌಂಡ್ ನ ಬದಿಯಲ್ಲಿ ಕಸ ಸುಡುವ ಜಾಗದಲ್ಲಿ ಕಸವನ್ನು ಹಾಕಿ ಕಸಕ್ಕೆ ಸ್ಯಾನಿಟೈಸರ್ ಹಾಕಿ ಬೆಂಕಿ ಹಚ್ಚುವಾಗ ಮಕ್ಕಳ ಕೈಯಲ್ಲಿದ್ದ ಸ್ಯಾನಿಟೈಸರ್ ಡಬ್ಬಿಗೆ ಆಕ ಬೆಂಕಿ ಹಿಡಿದು ಅದು ಸ್ಪೋಟಗೊಂಡು ಬೆಂಕಿಯ ಕಿಡಿಗಳು ಮಕ್ಕಳ ಮೈಮೇಲೆ ಬಿದ್ದ ಪರಿಣಾಮ ಶ್ರೀನಿವಾಸನಿಗೆ, ಅಮರೇಶ, ವಿನೋದ್ ಮತ್ತು ಮನೋಜ್ ಬಾವಿಮನೆ ರವರಿಗೆ ಸುಟ್ಟ ಗಾಯಗಳಾಗಿರುತ್ತದೆ
ಈ ಘಟನೆಗೆ ಹಾಸ್ಟೇಲ್ ನ ಅಡುಗೆ ಕೆಲಸದ ಸಾವಿತ್ರಿ ಮತ್ತು ಹಾಸ್ಟೇಲ್ ವಾರ್ಡನ್ ರವರ ನಿರ್ಲಕ್ಷತನದಿಂದ ಆಗಿರುತ್ತದೆ ಎಂದು ಗಾಯಗೊಂಡಿರುವ ಮಕ್ಕಳ ಹೆತ್ತವರು ನೀಡಿದ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.