Spread the love

ಬಸವನ ಹುಳ (ಹಿಸ್ಕು | ಸೂಳೆಪುಳಿ | ಗೊಂಡೆ ಹುಳು)ವನ್ನು ನೋಡದವರು ಯಾರು ? ಯಾರೂ ಇರಲಾರರು. ಇದು ಬಹಳ ಪಾಪದ ಬೆನ್ನಿನಲ್ಲಿ ಚಿಪ್ಪು ಇಲ್ಲದ ಹುಳವಾದರೂ ಇದನ್ನು ಮುಟ್ಟಲು ಮಾತ್ರ ಯಾರೂ ಹೋಗುವುದಿಲ್ಲ.

ಇದು ಒಂದು ರೀತಿಯ ಗಮ್ ಅಥವಾ ಅಂಟಿನಿಂದ ಕೂಡಿರುವುದರಿಂದ ಕೆಲವರಿಗಿದು ಅಸಹ್ಯದ ಹುಳವೂ ಹೌದು. ಬಹಳ ನಿಧಾನವಾಗಿ ಅಂಟು ದ್ರವವನ್ನು ನೆಲಕ್ಕೆ ಅಂಟಿಸಿಕೊಂಡು ಸಂಚರಿಸುವ ಹಿಸ್ಕು ಹುಳದಲ್ಲಿ ಕಪ್ಪುಬಣ್ಣದ ಹಿಸ್ಕನ್ನು ;ಇದು ನೋಡಲು ಸಿಗುವುದು ಬಲು ಅಪರೂಪ.

ಇಂದು (11/11/2022) ಕುಂಬಳೆ ಬಳಿಯ ಸೂರಂಬೈಲಿನಲ್ಲಿ ಉಡುಪಿಯ ಮಾಹಿತಿ ಹಕ್ಕು ಕಾರ್ಯಕರ್ತ, ಪತ್ರಕರ್ತ ಶ್ರೀರಾಮ ದಿವಾಣರ ಅಣ್ಣ ಸತ್ಯನಾರಾಯಣ ದಿವಾಣರ ಕಣ್ಣಿ ಗೆ ಈ ಅಪರೂಪದಲ್ಲಿ ಅಪರೂಪದ, ಅತಿರೂಪದ ಕಪ್ಪು ಹಿಸ್ಕು ಕಣ್ಣಿಗೆ ಬಿದ್ದಿದೆ. ಈ ಚಿತ್ರ ವನ್ನು ಅವರು ಎಲ್ಲರಿಗೂ ಹಂಚಿಕೊಂಡಿದ್ದಾರೆ.

error: No Copying!