ಪಡುಬಿದ್ರಿ: ನವೆಂಬರ್ 10 (ಹಾಯ್ ಉಡುಪಿ ನ್ಯೂಸ್) ಹೆಜಮಾಡಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕಳ್ಳರು ನುಗ್ಗಿ ಕಳ್ಳತನ ನಡೆಸಿರುವ ಬಗ್ಗೆ ದೂರು ದಾಖಲಾಗಿದೆ.
ಕಾಪು ತಾಲೂಕು ಹೆಜಮಾಡಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಹಿರಿಯ ಶಿಕ್ಷಕಿ ಆಗಿರುವ ಸಂಪಾವತಿ (48) ರವರು ದಿನಾಂಕ 08/11/2022 ರಂದು ಸಂಜೆ 5:00 ಗಂಟೆಗೆ ತರಗತಿ ಮುಗಿಸಿ ಎಲ್ಲಾ ಕೊಠಡಿ ಮತ್ತು ಶಾಲಾ ಕಛೇರಿಗೆ ಬೀಗ ಹಾಕಿ ಹೋಗಿದ್ದು, ನಂತರ ಯಾರೋ ಕಳ್ಳರು ರಾತ್ರಿ ಹೊತ್ತಿನಲ್ಲಿ ಯಾವುದೋ ಆಯುಧದಿಂದ ಮುಖ್ಯ ಶಿಕ್ಷಕರ ಕೊಠಡಿಯ ಬಾಗಿಲಿನ ಬೀಗವನ್ನು ಯಾವುದೋ ಆಯುಧದಿಂದ ಮುರಿದು ಬಾಗಿಲನ್ನು ತೆರೆದು ಒಳ ಪ್ರವೇಶಿಸಿ, ಒಳಗಿದ್ದ ಕಪಾಟುಗಳ ಬೀಗವನ್ನು ಮುರಿದಿದ್ದು, ಬಾಗಿಲು ತೆರೆದು ಒಳಗೆ ಹೋಗಿ, ಅಲ್ಲಿರುವ ಕಪಾಟಿನ ಬಾಗಿಲುಗಳನ್ನು ಕೂಡಾ ಯಾವುದೋ ಆಯುಧದಿಂದ ಹೊಡೆದು ತೆರೆದು ಜಾಲಾಡಿಸಿ ಕಪಾಟಿನ ಒಳಗೆ ಅಕ್ಷರ ದಾಸೋಹ ಆಹಾರ ವಸ್ತುಗಳ ಖರೀದಿಗೆಂದು ಇರಿಸಿದ್ದ ನಗದು ರೂಪಾಯಿ 15,000/- ಹಣವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಮತ್ತು ಹೈಸ್ಕೂಲ್ ಕಟ್ಟಡದಲ್ಲಿರುವ ಕಾಲೇಜು ವಿಭಾಗದ ಹಳೆಯ ಕಂಪ್ಯೂಟರ್, ಇನ್ವರ್ಟರ್, ಬ್ಯಾಟರಿಗಳಿರುವ ಕೊಠಡಿಯ ಬಾಗಿಲಿನ ಬೀಗವನ್ನು ಮುರಿದು ಕಳ್ಳತನಕ್ಕೆ ಪ್ರಯತ್ನಿಸಿರುತ್ತಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ .