Spread the love

ಮಲ್ಪೆ: ನವೆಂಬರ್ 10(ಹಾಯ್ ಉಡುಪಿ ನ್ಯೂಸ್) ರಾತ್ರಿ ಹೊತ್ತಿನಲ್ಲಿ ಪೆಟ್ರೋಲ್ ಬಂಕ್ ಒಂದರ ಕಚೇರಿಯ ಬೀಗ ಮುರಿದು ದಾಖಲೆ ಪತ್ರಗಳನ್ನು ಹಾಗೂ ಕಂಪ್ಯೂಟರ್ ಕಳವು ಮಾಡಿರುವ ಬಗ್ಗೆ ಮಹಿಳೆಯೋರ್ವರು ಪೊಲೀಸರಿಗೆ ದೂರು ನೀಡಿದ್ದಾರೆ.

ಮಂಗಳೂರು , ಕಂಕನಾಡಿ, ಕೊಚ್ಚಿನ್ ಬೇಕರಿ ಬಳಿಯ ಅನ್ವಿತಾ ಅಪಾರ್ಟ್ಮೆಂಟ್ ನಿವಾಸಿ ಶೈಲಜಾ ಸುರೇಶ್ ಜತ್ತನ್ ಇವರ ಮಾಲೀಕತ್ವದ ಉಡುಪಿ ತಾಲೂಕು ಮೂಡುತೋನ್ಸೆ ಗ್ರಾಮದ ಡೋರ್  ನಂಬ್ರ 5-217 (1) ರಲ್ಲಿರುವ  ಜತ್ತನ್ ಪೆಟ್ರೋ ಸರ್ವಿಸಸ್  ಎಂಬ ಕಛೇರಿಯ ಬೀಗವನ್ನು ಒಡೆದು  ಪೆಟ್ರೋಲ್ ಬಂಕ್ ನ ಮೂಲ ದಾಖಲೆಗಳನ್ನು, ಆಫೀಸ್ ನಲ್ಲಿರುವ ಸಾಮಾಗ್ರಿಗಳನ್ನು ಕಂಪ್ಯೂಟರನ್ನು ಸುಧೀರ ಹಾಗೂ ಪವಿತ್ರ ಎಂಬವರು ಕಳವು ಮಾಡಿಕೊಂಡು  ಹೋಗಿದ್ದಾರೆ ಎಂದು ಶೈಲಜಾ ರವರು ನೀಡಿದ ದೂರಿನಂತೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

error: No Copying!