Spread the love

ಮಣಿಪಾಲ: ನವೆಂಬರ್ 6(ಹಾಯ್ ಉಡುಪಿ ನ್ಯೂಸ್) ಕಾಲೇಜು ವಿದ್ಯಾರ್ಥಿಗಳು ಎನ್ನಲಾಗಿರುವ ಈರ್ವರು ಯುವಕ ಯುವತಿಯರ ಅಶ್ಲೀಲ ವೀಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿ ವೈರಲ್ ಆಗಿದೆ.

ಮಣಿಪಾಲದ ಹ್ರದಯ ಭಾಗದಲ್ಲಿರುವ ಮಾಲ್ ನಲ್ಲಿ ನಡೆದಿರುವ ಘಟನೆ ಎಂದು ತಿಳಿಸುವ ಈ ವೀಡಿಯೊವನ್ನು ಯಾರೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿಯ ಬಿಟ್ಟಿದ್ದಾರೆ.

ಉಡುಪಿ – ಮಣಿಪಾಲದ ಸನಿಹದ ಕಾಲೇಜೊಂದರ ವಿದ್ಯಾರ್ಥಿಗಳು ಎಂದು ಹೇಳಲಾಗಿದ್ದು; ವೀಡಿಯೋದಲ್ಲಿ ಸ್ಕೂಲ್ ಬ್ಯಾಗ್ ಗಳು ಕಾಣುತ್ತಿದ್ದು ಕಾಲೇಜು ವಿದ್ಯಾರ್ಥಿಗಳು ಹೌದೆಂದು ಸಾಕ್ಷ್ಯ ನುಡಿಯುತ್ತಿವೆ. ವೀಡಿಯೋದಲ್ಲಿ ಕಂಡು ಬಂದಿರುವ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿ ಸಂಪೂರ್ಣ ಅಶ್ಲೀಲ ವಾಗಿರುವ ಚಟುವಟಿಕೆಯಲ್ಲಿ ತೊಡಗಿದ್ದು ; ಮಾಲ್ ಒಂದರ ಡ್ರೆಸ್ಸಿಂಗ್ ರೂಮ್ ಅಥವಾ ಶೌಚಾಲಯದಲ್ಲಿ ಈ ಅಶ್ಲೀಲ ಚಟುವಟಿಕೆ ನಡೆದಿರುವಂತಿದೆ.

ಈ ವೀಡಿಯೊ ಸಮಾಜದ ಸ್ವಾಸ್ಥ್ಯ ಕೆಡವುವಂತದ್ದಾಗಿದ್ದು ಪೊಲೀಸ್ ಇಲಾಖೆ ಸ್ವಯಂಪ್ರೇರಿತ ವಾಗಿ ಈ ವೀಡಿಯೊ ಚಿತ್ರೀಕರಣ ಮಾಡಿ ವೈರಲ್ ಮಾಡಿರುವ ವ್ಯಕ್ತಿ ಹಾಗೂ ಅಶ್ಲೀಲ ಚಟುವಟಿಕೆ ಯಲ್ಲಿ ನಿರತರಾಗಿರುವ ವಿಧ್ಯಾರ್ಥಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗಿದೆ.ಹಾಗೂ ಈ ವೀಡಿಯೊ ವ್ಯೆರಲ್ ಆಗದಂತೆ ತಡೆಯಲು ಕ್ರಮ ಕೈಗೊಳ್ಳಬೇಕಾಗಿದೆ.

error: No Copying!