Spread the love

ತಾಂಜಾನಿಯಾ (ದಾರು ಏ ಸಲಾಮ್) : ನವೆಂಬರ್ 6 ( ಹಾಯ್ ಉಡುಪಿ ನ್ಯೂಸ್)  ವಿಮಾನವೊಂದು ಲ್ಯಾಂಡಿಂಗ್ ಮಾಡುವ ವೇಳೆ ವಿಕ್ಟೋರಿಯಾ ಸರೋವರದಲ್ಲಿ ಬಿದ್ದಿರುವ ಘಟನೆ ತಾಂಜಾನಿಯಾದಲ್ಲಿ ಭಾನುವಾರ ಸಂಭವಿಸಿದೆ.

ತಾಂಜಾನಿಯಾದ ದಾರ್ ಏ ಸಲಾಮ್‌ನಿಂದ ಬುಕಾಬು ವಿಮಾನ ನಿಲ್ದಾಣಕ್ಕೆ ಪ್ರೆಸೆಷನ್ ಏರ್ ಲೈನ್ಸ್ ಕಂಪೆನಿಯ ವಿಮಾನ ಹೊರಟಿತ್ತು. ಲ್ಯಾಂಡಿಂಗ್ ವೇಳೆ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ವಿಮಾನ ನಿಲ್ದಾಣದಿಂದ 100 ಮೀಟರ್ ದೂರದಲ್ಲಿರುವ ಬಕೋಬಾದ ವಿಕ್ಟೋರಿಯಾ ಸರೋವರದಲ್ಲಿ ವಿಮಾನ ಪತನಗೊಂಡಿದೆ ಎಂದು ತಿಳಿದು ಬಂದಿದೆ.

ವಿಮಾನದಲ್ಲಿ ಒಟ್ಟು 49 ಜನ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಸಾವು ನೋವಿನ ಬಗ್ಗೆ ಇದುವರೆಗೆ ವರದಿಯಾಗಿಲ್ಲ. ಪರಿಹಾರ ಕಾರ್ಯಾಚರಣೆ ಬರದಿಂದ ಸಾಗಿದೆ ಎಂದು ತಾಂಜಾನಿಯಾ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

error: No Copying!