Spread the love

ಹೆಬ್ರಿ: ನವೆಂಬರ್ 6 (ಹಾಯ್ ಉಡುಪಿ ನ್ಯೂಸ್) ಶ್ರಂಗೇರಿಯ ಪತ್ರಿಕೆಯೊಂದರ ಸಂಪಾದಕರಿಗೆ ಉಡುಪಿ ಜಿಲ್ಲೆಯ ಸೋಮೇಶ್ವರದಲ್ಲಿ ಕಾರಿನಲ್ಲಿ ಬಂದ ಈರ್ವರು ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದೆ.

ಶೃಂಗೇರಿಯ.ಹರಿಹರ ಬೀದಿ ನಿವಾಸಿ ಪಬ್ಲಿಕ್ ಮಿರರ್ ಪತ್ರಿಕೆಯ ಸಂಪಾದಕ ರಾಘವೇಂದ್ರ ಅವರು ದಿನಾಂಕ 03/11/2022 ರಂದು ಸಂಜೆ 7:00 ಗಂಟೆಗೆ ಸೊಮೇಶ್ವರದ ಮಯೂರ ಹೊಟೇಲ್ ನಲ್ಲಿ ಟೀ ಕುಡಿದು ಹೊರ ಬಂದಾಗ ಅಗುಂಬೆ ಕಡೆಯಿಂದ ಬಂದ ಕೆಂಪು ಬಣ್ಣದ ಕಿಯಾ ಕಾರು ಮುಂದೆ ಹೋಗಿ ಕಾರಿನಲ್ಲಿದ್ದವರು ರಾಘವೇಂದ್ರರನ್ನು ಕಂಡು ನಂತರ ಕಾರು ಹಿಂದೆ ಬಂದು ರಾಘವೇಂದ್ರರವರ ಬಳಿ ನಿಲ್ಲಿಸಿ ಅದರಿಂದ ಕೊಪ್ಪ ನಿವಾಸಿ ಪ್ರಸನ್ನ ಶೆಟ್ಟಿ ಯಾನೆ ಪುಷ್ಠಿ ಪ್ರಸನ್ನ ಹಾಗೂ ಕೊಪ್ಪ ಪಟ್ಟಣ ಪಂಚಾಯತ್ ಸದಸ್ಯ ಶ್ರೀನಿವಾಸ ಶೆಟ್ಟಿ ಎಂಬವರು ಕಾರಿನಿಂದ ಇಳಿದು ಏಕಾಏಕಿ ರಾಘವೇಂದ್ರರ ಬಳಿ ಬಂದು ನಮ್ ಬಗ್ಗೆ ಪತ್ರಿಕೆಯಲ್ಲಿ ಬರೀತೀಯಾ… ಎಂದು ಅವಾಚ್ಯಶಬ್ದಗಳಿಂದ ಬೈದು. ನಿನ್ನ ಕಾಲು ಕತ್ತರಿಸೋಕೆ ನಾವು ಕಾಯ್ತಾ ಇದ್ವಿ  ಇವತ್ತು ನಿನ್ನ ಸಾಯಿಸ್ತೀನಿ ಯಾರು ಬರ್ತಾರೆ  ಎಂಬುದಾಗಿ ಪ್ರಸನ್ನ ಶೆಟ್ಟಿ ಅವಾಚ್ಯವಾಗಿ ನಿಂದಿಸಿದ್ದಾನೆ ಎಂದು ರಾಘವೇಂದ್ರರವರು ದೂರಿದ್ದಾರೆ.

ಶ್ರೀನಿವಾಸ ಶೆಟ್ಟಿಯು ರಾಘವೇಂದ್ರರವರನ್ನು ಅಪಹರಣ ಮಾಡುವ ಉದ್ದೇಶದಿಂದ ಎತ್ತಿ ಕಾರಿನೊಳಗೆ ಹಾಕಲು ಪ್ರಯತ್ನಿಸಿದ್ದು. ಈ ಸಮಯ ರಾಘವೇಂದ್ರರೊಂದಿಗೆ ಇದ್ದ ಚಾಲಕ ಕಾರ್ತೀಕ್ ಬಂದು ಏನಾಯಿತು ಎಂದು ಕೇಳಿದಾಗ ಆರೋಪಿಗಳು ಅತನಿಗೆ ಅವಾಚ್ಯಶಬ್ದದಿಂದ ಬೈದು ಸುಮ್ನೆ ಇಲ್ಲಿಂದ ಹೋಗು ಎಂದು ಬೆದರಿಸಿದ್ದಾರೆ ನಂತರ ಪ್ರಸನ್ನ ಶೆಟ್ಟಿ ರಾಘವೇಂದ್ರ ರಿಗೆ ಮನ ಬಂದಂತೆ ಥಳಿಸಿ ಅವಾಚ್ಯಶಬ್ದಗಳಿಂದ ಬೈದುದಲ್ಲದೆ ಶ್ರೀನಿವಾಸ ಶೆಟ್ಟಿಯು ತನ್ನಲ್ಲಿ ಕಾರಿನಲ್ಲಿ ಲಾಂಗ್ ಇದೆ ಎಂದು ಬೆದರಿಕೆ ಹಾಕಿದ್ದು. ಆರೋಪಿ ಪ್ರಸನ್ನ ಶೆಟ್ಟಿಯು ರಾಘವೇಂದ್ರರಿಗೆ ಹೊಡೆಯುತ್ತಾ  ನಿನ್ನ ಸಾಯಿಸದೇ  ಬಿಡಲ್ಲ ಎಂದು ಬೆದರಿಸಿ ಈಗ ನೀನು ಇಲ್ಲಿಂದ ಓಡು ಕಂಪ್ಲೇಂಟ್ ಕೊಟ್ರೆ ಮತ್ತೆ ಸಿಕ್ಕಿದಾಗ ನಿನ್ನ ಕತೆ ಮುಗಿಸುತ್ತೇನೆ ಎಂದು ಬೆದರಿಸಿ  ಓಡು ಎಂದಾಗ ರಾಘವೇಂದ್ರರವರು ಮಯೂರ ಹೋಟೇಲ್ ಮುಂಭಾಗದಿಂದ ಗಣೇಶ್ ದೇವಸ್ಥಾನದ ತನಕ ಓಡಿದಾಗ ಅಲ್ಲಿಗೆ ರಾಘವೇಂದ್ರರ ಕಾರನ್ನು ಚಾಲಕ ಕಾರ್ತಿಕ್ ತಂದಿದ್ದು ರಾಘವೇಂದ್ರ ರವರು ಕಾರಿನಲ್ಲಿ ಕುಳಿತು ಅಲ್ಲಿಂದ ಪೊಲೀಸ್ ಠಾಣೆಗೆ ತೆರಳಿದರು ಎಂದು ರಾಘವೇಂದ್ರರವರು ಹೆಬ್ರಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ರಾಘವೇಂದ್ರರವರು ಪತ್ರಕರ್ತರಾಗಿದ್ದು. ವರದಿಗೆ ಸಂಬಂದಿಸಿ ಪ್ರಸನ್ನ ಶೆಟ್ಟಿ ಹಾಗೂ ಶ್ರೀ ನಿವಾಸ ಶೆಟ್ಟಿ ಯವರು ಈ ಕೃತ್ಯ ನಡೆಸಿದ್ದಾರೆ ಎನ್ನಲಾಗಿದ್ದು ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.   

error: No Copying!