Spread the love

ಪಡುಬಿದ್ರಿ: ನವೆಂಬರ್ 4 (ಹಾಯ್ ಉಡುಪಿ ನ್ಯೂಸ್) ಟೋಲ್ ಗೇಟ್ ಸಿಬ್ಬಂದಿಯೋರ್ವರಿಗೆ ಯುವಕರ ಗುಂಪೊಂದು ಎರಡು ಕಾರುಗಳಲ್ಲಿ ಬಂದು ಹಲ್ಲೆ ನಡೆಸಿದ ಬಗ್ಗೆ ದೂರು ದಾಖಲಾಗಿದೆ.

ಉಡುಪಿ ಜಿಲ್ಲೆ, ಕಾಪು ತಾಲೂಕು, ಹೆಜಮಾಡಿ ಗ್ರಾಮದ ಮಟ್ಟಿ ಹೌಸ್ ನಿವಾಸಿ ಸುದೀಶ್ ಜೆ ಶೆಟ್ಟಿ (42) ಇವರು ಕಾಪು ತಾಲೂಕು ಹೆಜಮಾಡಿ ಗ್ರಾಮದ ಟೋಲ್‌‌ಗೇಟಿನಲ್ಲಿ ಕೆಲಸ ಮಾಡಿಕೊಂಡಿದ್ದು ದಿನಾಂಕ 30/10/2022 ರಂದು ರಾತ್ರಿ ಕರ್ತವ್ಯದಲ್ಲಿರುವ ಸಮಯ  11:00 ಗಂಟೆಯ ವೇಳೆಗೆ ಹೆಜಮಾಡಿಯ ಸಂದೇಶ್ ಶೆಟ್ಟಿ, ಮನೋಜ್ ಸುವರ್ಣ, ಶ್ರೇಯಸ್ ದೇವಾಡಿಗ ಮುಕ್ಕ, ಜಯರಾಜ್ ಪೂಜಾರಿ ಹೆಜಮಾಡಿ, ಕೀರ್ತನ್ ಪೂಜಾರಿ ಕೊಪ್ಪಲ ಹೆಜಮಾಡಿ ಹಾಗೂ ಇತರೆ 3 ಜನರು KA-19-MM-6888 ಕಿಯಾ ಮತ್ತು KA-20-MD-4371 ನೇ ನಂಬ್ರದ ಎರಡು ಕಾರುಗಳಲ್ಲಿ ಹೆಜಮಾಡಿ ಟೋಲ್‌‌‌ಗೇಟ್ ಬಳಿ ಬಂದು ಸುದೀಶ್ ಜೆ ಶೆಟ್ಟಿ ಯನ್ನು ಏಕಾಏಕಿ ದೂಡಿ ಹಾಕಿ, ಹಲ್ಲೆ ನಡೆಸಿ, ಅವಾಚ್ಯ ಶಬ್ಧಗಳಿಂದ ಬೈದು ಬೆದರಿಕೆ ಹಾಕಿರುತ್ತಾರೆ ಎಂದು ಸುದೀಶ್ ಜೆ ಶೆಟ್ಟಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.  ಹಾಗೂ ರಾತ್ರಿ ಸಮಯ ಸುದೀಶ್ ಜೆ ಶೆಟ್ಟಿ ಗೆ ಪೋನ್ ಕರೆ ಮಾಡಿ ಬೆದರಿಕೆ  ಹಾಕುತ್ತಿದ್ದು, ಪೋನ್ ಕರೆ ಸ್ವೀಕರಿಸದಿದ್ದಾಗ ಮೆಸೇಜ್‌‌ಗಳ ಮೂಲಕ ಅವಾಚ್ಯ ಶಬ್ಧಗಳಿಂದ ನಿಂದಿಸಿ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರನ್ನು ನೀಡಿದ್ದು ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ .  

error: No Copying!