ನಾವು ಪ್ರತಿಕ್ರಿಯಿಸಲೇಬೇಕಾಗಿದೆ……
ಮಾಧ್ಯಮ ಸ್ವಾತಂತ್ರ್ಯ ಅತಿಮುಖ್ಯ,
ಮಾಧ್ಯಮ ಚಾರಿತ್ರ್ಯ ಅದಕ್ಕಿಂತ ಮಹತ್ವದ್ದು…….
” ಆತ್ಮಾವಲೋಕನ ಮತ್ತು ಜಾಗೃತಿ ಸತ್ಯಾಗ್ರಹ “
ರಾಜಕೀಯ ಭ್ರಷ್ಟಾಚಾರ,
ಆಡಳಿತಶಾಹಿ ಭ್ರಷ್ಟಾಚಾರ,
ಧಾರ್ಮಿಕ ಮತಾಂಧತೆಯ ಭ್ರಷ್ಟಾಚಾರ,
ಮತದಾರರ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಮತ್ತು ಸಾರ್ವಜನಿಕ ಅಭಿಪ್ರಾಯ ರೂಪಿಸುವ ಮಾಧ್ಯಮಗಳೇ ಭ್ರಷ್ಟವಾದರೇ ………
ಬದುಕುವ ಹಕ್ಕು ಎಲ್ಲರಿಗೂ ಇದೆ, ಅದು ಭ್ರಷ್ಟರಾಗಿಯಲ್ಲ ಶಿಷ್ಠರಾಗಿ ಮತ್ತು ನಾಗರಿಕರಾಗಿ……
ಬನ್ನಿ ಭಾಗವಹಿಸಿ….
ಮಾಧ್ಯಮ ಭ್ರಷ್ಟಾಚಾರದ ಸತ್ಯ ಮಿಥ್ಯಗಳ ಬಗ್ಗೆ ಚರ್ಚೆ – ಸಂವಾದ – ಮಂಥನ ಮಾಡೋಣ..
ದಿನಾಂಕ 06/11/2022
ಭಾನುವಾರ.
ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ…..
ಸ್ಥಳ ; ಸ್ವಾತಂತ್ರ್ಯ ಉದ್ಯಾನವನ – ಬೆಂಗಳೂರು…..
ಮಾಧ್ಯಮ ಭ್ರಷ್ಟಾಚಾರ ಪ್ರಜಾಪ್ರಭುತ್ವದ ಬಹುದೊಡ್ಡ ಅಪಾಯ….
ಅವರು ನಿರಾಕರಿಸುತ್ತಾರೆ,
ನಾವು ದೃಢಪಡಿಸುತ್ತೇವೆ……
ಅವರು ನೇರ ಸಾಕ್ಷ್ಯ ಕೇಳುತ್ತಾರೆ,
ನಾವು ಆತ್ಮಸಾಕ್ಷಿಗೆ ಕೇಳುತ್ತೇವೆ…..
ನಮ್ಮ ಮೌನ ಧ್ವನಿಯಾಗಲಿ,
ಇಲ್ಲದಿದ್ದರೆ ಅವರ ಧ್ವನಿ ನಮ್ಮನ್ನು ಮೌನವಾಗಿಸಬಹುದು…..
ಹಣ ಅಧಿಕಾರ ಪ್ರಶಸ್ತಿಗಳನ್ನು ಪಡೆಯುವುದು ಮಾತ್ರ ಭ್ರಷ್ಟಾಚಾರವಲ್ಲ.
ಸೈದ್ಧಾಂತಿಕ ಮತ್ತು ಸಂಕುಚಿತ ಮನಸ್ಸುಗಳ ಭ್ರಷ್ಟಾಚಾರ ಸಹ ಅತ್ಯಂತ ಅಪಾಯಕಾರಿ……..
ದಯವಿಟ್ಟು ತಪ್ಪದೇ ಭಾಗವಹಿಸಿ…
ನಿಮ್ಮ ಧ್ವನಿಗೆ ನಾವೇ ವೇದಿಕೆ……
ನಿಮ್ಮ ಒಂದು ದಿನದ ಸಾರ್ವಜನಿಕ ಬದುಕಿಗಾಗಿ ಮೀಸಲಿಡುವ ಸಮಯಾವಕಾಶ ಇಡೀ ಮಾಧ್ಯಮ ಕ್ಷೇತ್ರವನ್ನೇ ಪರಿವರ್ತನೆಯ ಹಾದಿಗೆ ಮರಳಿಸಬಹುದು……
.
ನಿಮ್ಮ ಜೊತೆಗೆ ಆಸಕ್ತ ಗೆಳೆಯರನ್ನು ಕರೆತನ್ನಿ……
ಮಾಧ್ಯಮಗಳು ” ನಮ್ಮನ್ನು ಜನ ಗಮನಿಸುತ್ತಿದ್ದಾರೆ ಆದ್ದರಿಂದ ನಾವು ಹೆಚ್ಚು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು – ನಾವು ಕೂಡ ಸಮಾಜಕ್ಕೆ ಲೆಕ್ಕ ಕೊಡಬೇಕು ” ಎಂಬ ಭಾವನೆ ಬಲಗೊಳ್ಳಲು ದಯವಿಟ್ಟು ಎಲ್ಲಾ ಕ್ಷೇತ್ರಗಳ, ಎಲ್ಲಾ ವರ್ಗಗಳ, ಎಲ್ಲಾ ವಯಸ್ಸಿನ ಎಲ್ಲರೂ ಭಾಗವಹಿಸಿ.
ಇದು ಯಾವುದೇ ಅಥವಾ ಯಾರದೇ ಮಿತಿಗೆ ಒಳಪಟ್ಟ ಕಾರ್ಯಕ್ರಮವಲ್ಲ.
ಸಂಪೂರ್ಣ ಪ್ರಬುದ್ದ ಮನಸ್ಸುಗಳ ಸಾರ್ವಜನಿಕ ಕಾರ್ಯಕ್ರಮ…..
ಇದು ನಿಮ್ಮದೇ ಕಾರ್ಯಕ್ರಮ….
ನಾವು ನಿಮ್ಮನ್ನು ಸ್ವಾಗತಿಸುವವರು ಮಾತ್ರ…….
ಎಂ. ಯುವರಾಜ್.
+91 80508 02019,
ವಿವೇಕಾನಂದ ಎಚ್.ಕೆ.
9844013068,
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್.ಕೆ.
9844013068……