ಶಂಕರನಾರಾಯಣ: ನವೆಂಬರ್ 2 (ಹಾಯ್ ಉಡುಪಿ ನ್ಯೂಸ್) ಹಳೆಯ ದ್ವೇಷದಿಂದ ಪರಿಚಯಸ್ಥನೋರ್ವ ತಲವಾರು ಬೀಸಿ ಕೊಲೆಗೆ ಯತ್ನಿಸಿದ ಘಟನೆ ಚಕ್ತೇಬೇರು ಎಂಬಲ್ಲಿ ನಡೆದಿದೆ.
ಕುಂದಾಪುರ ತಾಲೂಕು , ಸಿದ್ಧಾಪುರ ಗ್ರಾಮದ ಬಾಳೆಬೇರು ನಿವಾಸಿ ಭಾಸ್ಕರ ಶೆಟ್ಟಿ (43) ಇವರು ಸಿದ್ದಾಪುರ ಜನತಾ ಕಾಲೋನಿಯ ನಿವಾಸಿ ಗಣೇಶ ಎಂಬಾತನ ಮೇಲೆ ಈ ಹಿಂದೆ ಶಂಕರ ನಾರಾಯಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಈ ವಿಷಯದಲ್ಲಿ ಗಣೇಶ ಸಿದ್ಧಾಪುರ ದಿನಾಂಕ 01/11/2022 ರಂದು ಬೆಳಿಗ್ಗೆ 10:30 ಘಂಟೆಗೆ ಭಾಸ್ಕರ್ ಶೆಟ್ಟಿಯ ಮೊಬೈಲ್ ನಂಬ್ರಕ್ಕೆ ಕಾಲ್ ಮಾಡಿ ನಾನು ಕೊರಗಜ್ಜನ ಸನ್ನಿಧಿಯಲ್ಲಿ ಈ ಹಿಂದೆ ನೀಡಿದ ದೂರಿಗೆ ಕ್ಷಮೆ ಕೋರುತ್ತೇನೆ , ಹೋಗಿ ಬರುವ ಬಾ ಎಂದು ಹೇಳಿರುತ್ತಾನೆ, ಅದರಂತೆ ಭಾಸ್ಕರ ಶೆಟ್ಟಿ ರವರು ಸಿದ್ದಾಪುರ ಪೇಟೆಗೆ ಹೋಗಿ ಅಲ್ಲಿ ಗಣೇಶನ ಕೆಎ-20 ಬಿ-9971 ನೇ ನಂಬ್ರದ ಆಟೋರಿಕ್ಷಾ ದಲ್ಲಿ ಅಲ್ಲಿಂದ ಹೊರಟು ಕುಂದಾಪುರ ತಾಲೂಕಿನ ಸಿದ್ದಾಪುರ ಗ್ರಾಮದ ಚಕ್ತೇಬೇರು ಎಂಬಲ್ಲಿಗೆ ಹೋಗಿದ್ದು, ಅಲ್ಲಿ ಗಣೇಶನು ದೇವಸ್ಥಾನದ ಒಳಗಡೆ ಹೋಗಿ ಕ್ಷಮೆ ಕೇಳಿದಂತೆ ಮಾಡಿ ಸುಮಾರು 11:30 ಘಂಟೆಗೆ ದೇವಸ್ಥಾನದ ಹೊರಗಡೆ ಬಂದು ಇವತ್ತು ನಿನ್ನ ಕಡಿಯುವುದೇ ಎಂದು ಹೇಳಿ ಆತನ ಆಟೋರಿಕ್ಷಾದ ಒಳಗಡೆ ಇದ್ದ ತಲವಾರು ತೆಗೆದು ಭಾಸ್ಕರ ಶೆಟ್ಟಿ ಯವರನ್ನು ಕೊಲೆ ಮಾಡುವ ಉದ್ದೇಶದಿಂದ ತಲವಾರು ತೆಗೆದು ಕುತ್ತಿಗೆಗೆ ಬೀಸಿದ್ದು,ಈ ಸಮಯ ಭಾಸ್ಕರ್ ಶೆಟ್ಟಿ ತಪ್ಪಿಸಿಕೊಂಡಾಗ ತಲವಾರು ಅವರ ಬಲಭುಜಕ್ಕೆತಾಗಿ ತೀವ್ರ ಸ್ವರೂಪದ ಗಾಯ ವಾಗಿದ್ದು ಅವರು ತಪ್ಪಿಸಿಕೊಂಡು ಓಡಿ ಹೋಗಿದ್ದು ಭಾಸ್ಕರ್ ಶೆಟ್ಟಿಯ ವರು ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.