- ಕಾರ್ಕಳ: ನವೆಂಬರ್ 2(ಹಾಯ್ ಉಡುಪಿ ನ್ಯೂಸ್) ಕಾಲೇಜಿಗೆ ತೆರಳುವುದಾಗಿ ಹೇಳಿ ಹೋದ ವಿದ್ಯಾರ್ಥಿ ಕಾಲೇಜಿಗೂ ಹೋಗದೆ, ಮನೆಗೂ ಬಾರದೆ ಕಾಣೆಯಾಗಿರುವ ಬಗ್ಗೆ ಪೊಲೀಸರಿಗೆ ದೂರಲಾಗಿದೆ.
- ಮೂಡಬಿದ್ರೆಯ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂ.ಬಿ.ಎ ವ್ಯಾಸಾಂಗ ಮಾಡುತ್ತಿರುವ ಶ್ರೇಯಸ್ (23) ಈತನು ರಜೆಯಲ್ಲಿ ಇಂಟೆನ್ ಶಿಫ್ ಮಾಡಲು ದಿನಾಂಕ: 31.10.2022 ರಂದು ಬೆಳಗ್ಗೆ 10:00 ಗಂಟೆಗೆ ಕಾರ್ಕಳದಿಂದ ಮಂಗಳೂರಿಗೆ ಹೋಗುವುದಾಗಿ ಹೊರಟಿದ್ದು, ಸತೀಶ್ ಎಸ್ ಮಾಬೆನ್ ಎಂಬವರು ಕಾರ್ಕಳ ಬಸ್ ನಿಲ್ದಾಣಕ್ಕೆ ಶ್ರೇಯಸ್ ನನ್ನು ಬಿಟ್ಟಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ .
- ಆದರೆ ಶ್ರೇಯಸ್ ರವರು ಸಂಜೆಯಾದರು ಪೋನ್ ಮಾಡದೇ, ಮನೆಗೂ ಬಾರದೇ ಕಾಣೆಯಾಗಿರುತ್ತಾನೆ. ಈ ಬಗ್ಗೆ ಕಾಲೇಜಿನಲ್ಲಿ ವಿಚಾರಿಸಿದಾಗ ಶ್ರೇಯಸ್ ರವರು ಅಲ್ಲಿಗೆ ಬಂದಿರುವುದಿಲ್ಲವಾಗಿ ಕಾಲೇಜಿನವರು ತಿಳಿಸಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.