ಕುಂದಾಪುರ: ನವೆಂಬರ್ 1(ಹಾಯ್ ಉಡುಪಿ ನ್ಯೂಸ್) ಕಾವ್ರಾಡಿ ಗ್ರಾಮದ ಹೊಳೆಯ ಬದಿಯಲ್ಲಿ ಜಾನುವಾರು ಕದ್ದು ; ಹತ್ಯೆಗೆ ಸಿದ್ಧತೆ ನಡೆಸುತ್ತಿದ್ದ ನಾಲ್ವರು ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ.
ದಿನಾಂಕ 31.10.2022 ರಂದು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ಪಿಎಸ್‌ಐ ಪವನ್ ನಾಯಕ್ ರವರು ಠಾಣಾ ಸಿಬ್ಬಂದಿಯವರೊಂದಿಗೆ ಇಲಾಖಾ ವಾಹನದಲ್ಲಿ ರಾತ್ರಿ ವಿಶೇಷ ರೌಂಡ್ಸ್ ಕರ್ತವ್ಯದಲ್ಲಿ ಇರುವಾಗ ಕುಂದಾಪುರ ತಾಲೂಕು ಕಾವ್ರಾಡಿ ಗ್ರಾಮದ ಕಂಡ್ಲೂರು ಜುಲ್ಫಾ ಸ್ಟೋರ್ ಬಳಿ ಇರುವ ವರಾಹಿ ಹೊಳೆಯ ಬದಿಯಲ್ಲಿ ಹಸುವನ್ನು ಎಲ್ಲಿಂದಲೋ ಕಳವು ಮಾಡಿಕೊಂಡು ಬಂದು ಮಾಂಸ ಮಾಡಲು ಸಿದ್ದತೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದಿದ್ದು ಅದರಂತೆ ಠಾಣೆಯ ಸಿಬ್ಬಂದಿ ಯವರೊಂದಿಗೆ ಹೊರಟು ಮಾಹಿತಿ ಬಂದ ಸ್ಥಳಕ್ಕೆ ದಾಳಿ ನಡೆಸಿದಾಗ 1.ಶಾಹೀದ್ ಆಲಿ, 2.ಟಿ.ಕೆ ಮುಜಾಫರ್, 3.ಕರಾಣಿ ನದೀಮ್, 4.ಕರಾಣಿ ಮಂಜೂರ್ ಎಂಬವರುಗಳು ಒಂದು ಹಸುವಿನ ಪಕ್ಕದಲ್ಲಿ ನಿಂತಿದ್ದು ಪೊಲೀಸರನ್ನು ಕಂಡು ಇಬ್ಬರು ವ್ಯಕ್ತಿಗಳು ಓಡಿ ಹೋಗಿದ್ದು ಉಳಿದವರಾದ ಶಾಹೀದ್ ಆಲಿ ಮತ್ತು ಟಿ.ಕೆ ಮುಜಾಫರ್ ಇವರನ್ನು ಪೊಲೀಸ್ ಸಿಬ್ಬಂದಿಗಳ ಸಹಾಯದಿಂದ ಸುತ್ತುವರಿದು ಬಂಧಿಸಿ ವಿಚಾರಣೆ ನಡೆಸಿ ಅವರು ಕೃತ್ಯಕ್ಕೆ ಬಳಸಿದ್ದ ಒಂದು ಗಂಡು ಕರು, ಮರದ ತುಂಡು 1, ಮಚ್ಚು 1, ಹಾಗೂ ಮೆಟ್ ಕತ್ತಿ 1 ನ್ನು ಪೊಲೀಸರು ಸ್ವಾಧೀನ ಪಡಿಸಿಕೊಂಡಿರುತ್ತಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧ್ಯಾದೇಶ-2020 ಹಾಗೂ ಪ್ರಾಣಿ ಹಿಂಸೆ ನಿಷೇಧ ಕಾಯ್ದೆ- 1960 ಯಂತೆ ಪ್ರಕರಣ ದಾಖಲಾಗಿರುತ್ತದೆ.