Spread the love

ಕಾಪು: ಕರ್ನಾಟಕ ರಕ್ಷಣಾ ವೇದಿಕೆ, ಉಡುಪಿ ಜಿಲ್ಲೆಯ ಕಾಪು ತಾಲೂಕು ಘಟಕದ ಉದ್ಘಾಟನಾ ಸಮಾರಂಭವನ್ನು ದಿನಾಂಕ 30-10-2022 ರಂದು ಕಾಪು ತಾಲೂಕು ಮಹಿಳಾ ಅಧ್ಯಕ್ಷೆ ಗೀತಾ ಪಾಂಗಾಳ ಮತ್ತು ಕಾಪು ತಾಲೂಕು ಅಧ್ಯಕ್ಷರಾದ
ವಿರೇಶ್ ಪಿ. ಕೆ. ಹಮ್ಮಿಕೊಂಡು, ಉಡುಪಿ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಸುಜಯ ಪೂಜಾರಿಯವರು ಅಧ್ಯಕ್ಷತೆ ವಹಿಸಿಕೊಂಡು ಉದ್ಘಾಟಿಸಿದರು. ಈ ಸಂಧರ್ಭದಲ್ಲಿ ಕೈಪುಂಜಾಲು ಬಬ್ಬು ಸ್ವಾಮಿ ಕ್ಷೇತ್ರದ ಸಹಗುರಿಕಾರರಾದ ರಾಮಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯಕ್, ಜಿಲ್ಲಾ ಮಹಿಳಾ ಸಲಹೆಗಾರ್ತಿ ಸುನಂದಾ ಕೋಟ್ಯಾನ್, ಬೃಹ್ಮಾವರ ತಾಲೂಕು ಅಧ್ಯಕ್ಷ ಪ್ರ್ಯಾಂಕಿ ಡಿಸೋಜಾ, ಉಡುಪಿ ತಾಲೂಕು ಅಧ್ಯಕ್ಷ ಅರಾ ಪೃಭಾಕರ ಪೂಜಾರಿ, ಉಡುಪಿ ತಾಲೂಕು ಮಹಿಳಾ ಅಧ್ಯಕ್ಷೆ ಮಮತಾ, ಕಾಪು ತಾಲೂಕು ಸದಸ್ಯ ಆನಂದ್ ಶೆಟ್ಟಿ, ಕಾಪು ತಾಲೂಕು ಉಪಾಧ್ಯಕ್ಷೆ ಗೌರಿ, ಕಾಪು ತಾಲೂಕು ಪ್ರಧಾನ ಕಾರ್ಯದರ್ಶಿ ಶಶಿಕಲಾ, ಹಾಗೂ ಕಾಪು ತಾಲೂಕು ಪದಾಧಿಕಾರಿಗಳು ಮತ್ತು ಸದಸ್ಯರ ಸಮ್ಮುಖದಲ್ಲಿ ನೆರವೇರಿತು.

error: No Copying!