- ಕಾರ್ಕಳ: ಅಕ್ಟೋಬರ್ 27 (ಹಾಯ್ ಉಡುಪಿ ನ್ಯೂಸ್) ಕಾರ್ಕಳ ಬಸ್ಸು ನಿಲ್ದಾಣದ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದವನನ್ನು ಕಾರ್ಕಳ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
- ಕಾರ್ಕಳ ನಗರ ಠಾಣಾ ಸರಹದ್ದಿನ ಕಸಬಾ ಗ್ರಾಮದ ಕಾರ್ಕಳ ಬಸ್ ಸ್ಟಾಂಡ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಸಾರ್ವಜನಿಕರಿಂದ ಮಟ್ಕಾ ಜುಗಾರಿ ಆಟದ ಬಗ್ಗೆ ಹಣವನ್ನು ಪಣವಾಗಿ ಸಂಗ್ರಹಿಸುತ್ತಿದ್ದಾನೆಂದು ಕಾರ್ಕಳ ನಗರ ಠಾಣಾ ಪೊಲೀಸರಿಗೆ ದಿನಾಂಕ 23-10-2022 ರಂದು ಖಚಿತ ಮಾಹಿತಿ ಬಂದಿದ್ದು, ಮಾಹಿತಿಯಂತೆ ಆ ಸ್ಥಳಕ್ಕೆ ಧಾಳಿ ನಡೆಸಿದಾಗ ನಿತೇಶ ಎಂಬಾತನು ಸಾರ್ವಜನಿಕರನ್ನು ಸೇರಿಸಿಕೊಂಡು ಒಂದು ರೂಪಾಯಿಗೆ 70 ರೂಪಾಯಿ ಕೊಡುತ್ತೇನೆಂದು ಕೂಗಿ ಕರೆದು ಹಾಳೆಯಲ್ಲಿ ಪೆನ್ನಿನಿಂದ ಬರೆದು ಹಣವನ್ನು ಪಣವಾಗಿ ಸಂಗ್ರಹಿಸುತ್ತಿದ್ದು ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆತನು ತನ್ನ ಸ್ವಂತ ಲಾಭಕ್ಕಾಗಿ ಮಟ್ಕಾ ಜುಗಾರಿ ಆಟದ ಬಗ್ಗೆ ಸಾರ್ವಜನಿಕರಿಂದ ಹಣವನ್ನು ಪಣವಾಗಿ ಸಂಗ್ರಹಿಸುತ್ತಿದ್ದೇನೆಂದು ತಪ್ಪನ್ನು ಒಪ್ಪಿ ಕೊಂಡಿದ್ದು , ಪೊಲೀಸರು ಆತನನ್ನು ಬಂಧಿಸಿ ಆತನ ಬಳಿ ಇದ್ದ ನಗದು ರೂಪಾಯಿ 1150/, ಬಾಲ್ ಪೆನ್ನು ಮತ್ತು ಮಟ್ಕಾ ಚೀಟಿಯನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ.
- ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.