Spread the love
  • ಕುಂದಾಪುರ: ಅಕ್ಟೋಬರ್ 28 (ಹಾಯ್ ಉಡುಪಿ ನ್ಯೂಸ್) ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಸೇವನೆ ಮಾಡಿದ್ದ ನಾಲ್ವರು ಯುವಕರನ್ನು ಪೋಲಿಸರು ಬಂಧಿಸಿದ್ದಾರೆ
  • ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಪಿಎಸ್ಐ ಪವನ್ ನಾಯಕ್ ಅವರು 21-10-2022 ರಂದು ಮದ್ಯಾಹ್ನ ರೌಂಡ್ಸ್‌ ಕರ್ತವ್ಯದಲ್ಲಿರುವ ಸಮಯದಲ್ಲಿ ಸಾರ್ವಜನಿಕರಿಂದ ದೂರು ಗಳು ಬಂದ ಮೇರೆಗೆ ಧಾಳಿ ನಡೆಸಿ ಕುಂದಾಪುರ ತಾಲೂಕು ಬಸ್ರೂರು ಗ್ರಾಮದ ಬಸ್ಸು ನಿಲ್ದಾಣದ ಬಳಿ ನಿಷೇದಿತ ಮಾಧಕ ದ್ರವ್ಯ ಗಾಂಜಾವನ್ನು ಸೇವಿಸಿ ತೂರಾಡುತ್ತಿದ್ದ ಆಕಾಶ್‌ (23), ಕುಂದಾಪುರ ತಾಲೂಕು ಬಸ್ರೂರು ಗ್ರಾಮದ ಶಾರದಾ ಕಾಲೇಜಿನ ಬಳಿ ನಿಷೇಧಿತ ಮಾದಕವಸ್ತು ಗಾಂಜಾ ಸೇವನೆ ಮಾಡಿ ತೂರಾಡುತ್ತಿದ್ದ ಗೌತಮ ಯಾನೆ ಬುದ್ಧ (26), ಕುಂದಾಪುರ ತಾಲೂಕು ಕಟ್ ಬೆಲ್ತೂರು ಗ್ರಾಮದ ಶ್ರೀ ಭದ್ರ ಮಹಾಕಾಳಿ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿರುವ ರಿಕ್ಷಾ ನಿಲ್ದಾಣದ ಬಳಿ ಗಾಂಜಾ ಸೇವನೆ ಮಾಡಿ ತೂರಾಡುತ್ತಿದ್ದ ಪ್ರವೀಣ (26) , ಕುಂದಾಪುರ ತಾಲೂಕು ಕಾವ್ರಾಡಿ ಗ್ರಾಮದ ದೂಪದ ಕಟ್ಟೆ ಬಳಿ ಇರುವ ರಿಕ್ಷಾ ನಿಲ್ದಾಣದ ಬಳಿ ಗಾಂಜಾ ಸೇವನೆ ಮಾಡಿದ್ದ ಎಮ್.ಜಿ.ನಿದೀಶ್ (20) ಎಂಬವರನ್ನು ಬಂಧಿಸಿ , ವಿಚಾರಣೆ ನಡೆಸಿ ಈ ನಾಲ್ವರನ್ನೂ ಗಾಂಜಾ ಸೇವಿಸಿರುವ ಬಗ್ಗೆ ದೃಢ ಪಡಿಸುವ ಬಗ್ಗೆ ಕುಂದಾಪುರ ಶ್ರೀ ಮಾತಾ ಆಸ್ಪತ್ರೆಯ ವೈದ್ಯಾಧಿಕಾರಿಯವರ ಮುಂದೆ ಹಾಜರುಪಡಿಸಿದ್ದು ವೈದ್ಯಾಧಿಕಾರಿಯವರು ನಾಲ್ವರನ್ನೂ ಪರೀಕ್ಷಿಸಿ ನಿಷೇದಿತ ಮಾದಕ ದ್ರವ್ಯ ಗಾಂಜಾ ಸೇವನೆಯನ್ನು ಮಾಡಿರುವುದನ್ನು ದೃಡಪಡಿಸಿರುತ್ತಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
error: No Copying!