Spread the love
  • ಮಣಿಪಾಲ: ಅಕ್ಟೋಬರ್ 26 ( ಹಾಯ್ ಉಡುಪಿ ನ್ಯೂಸ್) ಮಣಿಪಾಲ ಠಾಣಾ ವ್ಯಾಪ್ತಿಯ ಬೈರಂಜೆಯ ಮನೆಯೊಂದರಲ್ಲಿ ನಿಲ್ಲಿಸಿದ್ದ ದ್ವಿ ಚಕ್ರ ವಾಹನವನ್ನು ಯಾರೋ ಕಳ್ಳರು ಕದ್ದೊಯ್ದಿರುವ ಬಗ್ಗೆ ದೂರು ದಾಖಲಾಗಿದೆ.
  • ಉಡುಪಿ ತಾಲೂಕು , 80 ಬಡಗ ಬೆಟ್ಟು ಗ್ರಾಮದ ಬೈರಂಜೆ ನಿವಾಸಿ ರಾಜೇಶ್ವರ (43) ಇವರು ದಿನಾಂಕ 22-10-2022ರಂದು ತನ್ನ KA-20 V-6354 ನೇ ಮೋಟಾರ್ ಸೈಕಲನ್ನು ಕೆಲಸ ಮುಗಿಸಿಕೊಂಡು ರಾತ್ರಿ ೯ ಘಂಟೆಗೆ ತಮ್ಮ ಮನೆಯ ಕಂಪೌಂಡ್ ಒಳಗೆ ನಿಲ್ಲಿಸಿ ಹ್ಯಾಂಡ್ ಲಾಕ್ ಮಾಡಿ ನಿಲ್ಲಿಸಿದ್ದು, ದಿನಾಂಕ 23/10/2022 ರಂದು ಬೆಳಿಗ್ಗೆ 07:00 ಗಂಟೆಯ ಸಮಯಕ್ಕೆ ರಾಜೇಶ್ವರ ರವರು ಮನೆಯ ಹೊರಗಡೆ ಬಂದು ನೋಡಿದಾಗ ಕಂಪೌಂಡ್ ಒಳಗೆ ನಿಲ್ಲಿಸಿದ ಮೋಟಾರ್ ಸೈಕಲ್ ಅಲ್ಲಿ ಇಲ್ಲವಾಗಿದ್ದು ದಿನಾಂಕ 22/10/2022 ರ ರಾತ್ರಿ ಯಾರೊ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂದೂ ,ಕಳವಾದ ತನ್ನ ಮೋಟಾರ್‌ಸೈಕಲ್‌ನ ಅಂದಾಜು ಬೆಲೆ 20000 ರೂಪಾಯಿ ಗಳೆಂದು ದೂರಿದ್ದಾರೆ.ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿರುತ್ತದೆ.
error: No Copying!