ಡೆಹ್ರಾಡೂನ್ : ಆಕ್ಟೋಬರ್ 17 (ಹಾಯ್ ಉಡುಪಿ ನ್ಯೂಸ್) ರೆಸಾರ್ಟ್ ರಿಸೆಪ್ಷನಿಸ್ಟ್ ಅಂಕಿತಾ ಭಂಡಾರಿ(19) ಕೊಲೆ ಪ್ರಕರಣದಲ್ಲಿ ಕೊಲೆಗೂ ಮುನ್ನ ಅತ್ಯಾಚಾರ ನಡೆದಿಲ್ಲ ಎಂದು ಫೊರೆನ್ಸಿಕ್ ವರದಿ ಕೈ ಸೇರಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಒಳಾಂಗಗಳ ಮಾದರಿಗಳ ವರದಿಗಳು ಆಕೆಯನ್ನು ಕೊಲ್ಲುವ ಮೊದಲು ಆಕೆಯ ಮೇಲೆ ಯಾವುದೇ ಲೈಂಗಿಕ ದೌರ್ಜನ್ಯದ ಬಗ್ಗೆ ಮಾತನಾಡಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.
ಉತ್ತರಾಖಂಡದ ಪೌರಿ ಗರ್ವಾಲ್ ಜಿಲ್ಲೆಯ ಶ್ರೀಕೋಟ್ ಗ್ರಾಮದಲ್ಲಿ ಅಂಕಿತಾ ಭಂಡಾರಿಯವರು ರೆಸಾರ್ಟ್ ಒಂದರಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಸೆಪ್ಟೆಂಬರ್ 24ರಂದು ಉತ್ತರಾಖಂಡದ ಋಷಿಕೇಷದ ಚಿಲ್ಲಾನ ಕಾಲುವೆಯಲ್ಲಿ ಅಂಕಿತಾ ಭಂಡಾರಿ (19) ಶವ ಪತ್ತೆಯಾಗಿತ್ತು.
ರೆಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ರೆಸಾರ್ಟ್‌ನ ಮಾಲೀಕರಿಂದ ಹತ್ಯೆಗೀಡಾದ ಅಂಕಿತಾ ಭಂಡಾರಿ ಅವರ ಒಳಾಂಗಗಳ ಮಾದರಿಗಳ ಪ್ರಾಥಮಿಕ ವಿಧಿವಿಜ್ಞಾನ ಪರೀಕ್ಷೆಯ ವರದಿಗಳು ಲೈಂಗಿಕ ದೌರ್ಜನ್ಯವನ್ನು ತಳ್ಳಿಹಾಕಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
ಬಿಜೆಪಿಯ ನಾಯಕನ ಮಗನಾದ ಪುಲ್ಕಿತ್ ಆರ್ಯ ಮತ್ತು ಅವನ ಇಬ್ಬರು ಸಹಚರರು ಅಂಕಿತಾ ಭಂಡಾರಿಯವರ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿ ಅವರನ್ನು ಬಂಧಿಸಲಾಗಿತ್ತು. ಕೊಲೆಗಾರರನ್ನು ಗಲ್ಲಿಗೇರಿಸಬೇಕೆಂದು ಒತ್ತಾಯಿಸಿ ದೇಶದಾದ್ಯಂತ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು.
ಈ ನಡುವೆ ಫೊರೆನ್ಸಿಕ್ಸ್ ವರದಿಗಳು ಬಂದಿದ್ದು; ಒಳಾಂಗಗಳ ಮಾದರಿಗಳ ವರದಿಗಳು ಆಕೆಯನ್ನು ಕೊಲ್ಲುವ ಮೊದಲು ಆಕೆಯ ಮೇಲೆ ಯಾವುದೇ ಲೈಂಗಿಕ ದೌರ್ಜನ್ಯದ ನಡೆದಿರುವ ಬಗ್ಗೆ ಹೇಳಿಲ್ಲ ಎಂದು ಅಧಿಕಾರಿಯು ತಿಳಿಸಿದ್ದಾರೆ.
ರಿಷಿಕೇಶದ ಏಮ್ಸ್ ನೀಡಿದ ಮರಣೋತ್ತರ ಪರೀಕ್ಷೆಯ ವರದಿ ಹಾಗೂ ಫೋರೇನ್ಸಿಕ್ ವರದಿಯು ಆಕೆಯ ಮೇಲೆ ಅತ್ಯಾಚಾರ ನಡೆದಿಲ್ಲ ಎಂದು ವರದಿಯನ್ನು ನೀಡಿದ್ದು, ಇದು ಸಂತ್ರಸ್ತೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದನ್ನು ತಳ್ಳಿಹಾಕಿದೆ ಎಂದು ಅವರು ಹೇಳಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಐಜಿ ಟಿ ರೇಣುಕಾ ದೇವಿ ನೇತೃತ್ವದ ಎಸ್ಐಟಿ ತನಿಖೆ ಪ್ರಗತಿಯಲ್ಲಿದ್ದು ,ಆರೋಪಿಗಳಾದ ಪುಲ್ಕಿತ್ ಆರ್ಯ ಮತ್ತು ಆತನ ಇಬ್ಬರು ಸಹಚರರು ಜೈಲಿನಲ್ಲಿದ್ದಾರೆ. ಉತ್ತರಾಖಂಡ ಮಹಿಳಾ ಆಯೋಗವು ತನಿಖೆಯ ಮೇಲ್ವಿಚಾರಣೆಗೆ ಸಮಿತಿಯನ್ನು ಸ್ಥಾಪಿಸಿದೆ.