ಉತ್ತರ ಪ್ರದೇಶ: ಅಕ್ಟೋಬರ್ 17(ಹಾಯ್ ಉಡುಪಿ ನ್ಯೂಸ್) ಉತ್ತರ ಪ್ರದೇಶದಲ್ಲಿ ಮಹಿಳೆಯೋರ್ವರ ಮೇಲೆ ಆಶ್ರಮವೊಂದರಲ್ಲಿ ಸಾಮೂಹಿಕ ಅತ್ಯಚಾರ ನಡೆದಿರುವ ಬಗ್ಗೆ ದೂರು ದಾಖಲಾಗಿದೆ.
ಉತ್ತರ ಪ್ರದೇಶದ ರಾಜಧಾನಿ ಲಖನೌನ ಆಶ್ರಮವೊಂದರಲ್ಲಿ 52 ವರ್ಷದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಸಂತ್ರಸ್ಥ ಮಹಿಳೆ ಪೋಲಿಸರಿಗೆ ದೂರು ನೀಡಿದ್ದಾರೆ.
ಈ ಕುರಿತು ಸಂತ್ರಸ್ತ ಮಹಿಳೆ ಲಖನೌ ಪೊಲೀಸರಿಗೆ ದೂರು ನೀಡಿದ್ದು, ಅತ್ಯಾಚಾರ ನಡೆಸಿರುವ ಬಗ್ಗೆ ಪೊಲೀಸರಿಗೆ ತಿಳಿಸಿದರೆ ಕೊಲೆ ಮಾಡುವುದಾಗಿ ಆಶ್ರಮದ ಮುಖ್ಯಸ್ಥ ಸಂತ್ರಸ್ಥ ಮಹಿಳೆಗೆ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ.
ಲಖನೌದ ಆಶ್ರಮದ ಬಗ್ಗೆ ವಾರಣಾಸಿಯ ಸನ್ಯಾಸಿನಿಯೊಬ್ಬರು ಪರಿಚಯ ಮಾಡಿಕೊಟ್ಟಿದ್ದರು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ . ಅ.4 ರಂದು ಸಂಜೆ ಆಶ್ರಮದಲ್ಲಿ ಮಹಿಳೆ ಏಕಾಂಗಿಯಾಗಿದ್ದಾಗ ಮಹಿಳೆಗೆ ಆಹಾರದಲ್ಲಿ ನಿದ್ರೆ ಬರುವ ಔಷಧಿ ಹಾಕಿ ಕೊಟ್ಟಿದ್ದರು.ನಿದ್ರೆಯಿಂದ ಎದ್ದು ನೋಡಿದಾಗ ಮಹಿಳೆ ಸಂಪೂರ್ಣ ಬೆತ್ತಲೆಯಾಗಿದ್ದರು ಎಂದು ದೂರಿನಲ್ಲಿ ಹೇಳಿದ್ದಾರೆ . ಆ ನಂತರ ಮಹಿಳೆಗೆ ತನ್ನ ಮೇಲೆ ನಾಲ್ವರು ಸಾಮೂಹಿಕ ಅತ್ಯಾಚಾರ ನಡೆಸಿರುವುದು ಗೊತ್ತಾಯಿತು’ ಎಂದು ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ಆಶ್ರಮದ ಯಾವುದೇ ವ್ಯಕ್ತಿಯ ಬಂಧನವಾಗಿಲ್ಲ. ತನಿಖೆ ನಡೆಯುತ್ತಿದೆ ಎಂದು ಡಿಸಿಪಿ ಪ್ರಾಚಿ ಸಿಂಗ್ ಮಾಹಿತಿ ನೀಡಿದ್ದಾರೆ.
ಲಖನೌದಲ್ಲಿ ಶನಿವಾರ 18 ವರ್ಷದ ಯುವತಿ ಮೇಲೆ ಆಟೋ ಚಾಲಕ ಹಾಗೂ ಆತನ ಸಹಚರ ಅತ್ಯಾಚಾರ ನಡೆಸಿರುವ ಪ್ರಕರಣ ದಾಖಲಾಗಿದ್ದು ಇದೀಗ 24 ಗಂಟೆಯೊಳಗೆ ಇನ್ನೊಂದು ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಾಗಿದೆ.