Spread the love

ಉಡುಪಿ: ಅಕ್ಟೋಬರ್ 16 (ಹಾಯ್ ಉಡುಪಿ ನ್ಯೂಸ್) ಮಣಿಪಾಲ ಪರಿಸರದಲ್ಲಿ ಮಾದಕವಸ್ತು ಮಾರಾಟ ಮಾಡಲು ಯತ್ನಿಸುತ್ತಿದ್ದವನನ್ನು ಉಡುಪಿ ಸೆನ್ ಅಪರಾಧ ಪೋಲಿಸರು ಕ್ಷಿಪ್ರ ಕಾರ್ಯಾಚರಣೆ ಯೊಂದರಲ್ಲಿ ಬಂಧಿಸಿದ್ದಾರೆ

ಸೆನ್ ಅಪರಾಧ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕರಾದ ಮಂಜುನಾಥ ಇವರು ದಿನಾಂಕ 15-10-2022 ರಂದು ಉಡುಪಿ ತಾಲೂಕು ಹೆರ್ಗ ಗ್ರಾಮದ ಶೇಷಾದ್ರಿ ನಗರ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ನಿಷೇದಿತ ಮಾದಕ ವಸ್ತು MDMA ಪೌಡರ್ ಮಾರಾಟ ಮಾಡಲು ಯತ್ನಿಸುತ್ತಿದ್ದ ಉಡುಪಿ ತಾಲೂಕು, ಹಿರಿಯಡ್ಕ ಗ್ರಾಮದ, ಬೆಲ್ಲಾರ್ ಪಡಿ , ದೇವಸ್ಥಾನ ಬೆಟ್ಟು , ಮೇಲ್ಮನೆ ನಿವಾಸಿ ರಾಘವೇಂದ್ರ ದೇವಾಡಿಗ ಎಂಬಾತನನ್ನು  ಬಂಧಿಸಿ ಆತನಿಂದ 4.61 ಗ್ರಾಂ ತೂಕದ MDMA ಪೌಡರ್, KA- 15-EC- 8656 ನಂಬ್ರದ ಸ್ಕೂಟರ್, ಮೊಬೈಲ್ ಪೋನ್,  ವೇಯಿಂಗ್ ಮೆಷಿನ್ , ನೀಲಿ ಬಣ್ಣದ ಬ್ಯಾಗ್ , MDMA ಪೌಡರ್ ಪ್ಯಾಕ್ ಮಾಡಲು ಬಳಸುವ ಸಣ್ಣ ಪ್ಲಾಸ್ಟಿಕ್ ಕವರ್ ಗಳು, ನಗದು ರೂಪಾಯಿ 2300/- ನನ್ನು ಪೊಲೀಸರು ವಶಪಡಿಸಿಕೊಂಡಿರುತ್ತಾರೆ. ಇಮ್ರಾನ್  ಎಂಬಾತ ರಾಘವೇಂದ್ರ ದೇವಾಡಿಗನಿಗೆ ಮಾರಾಟ ಮಾಡಲು  MDMA ಪೌಡರ್  ನೀಡಿದ್ದಾನೆ ಎಂದು ತನಿಖೆಯ ವೇಳೆ ರಾಘವೇಂದ್ರ ದೇವಾಡಿಗ ಪೊಲೀಸರಿಗೆ ತಿಳಿಸಿರುತ್ತಾನೆ .

ಪೋಲಿಸರು ಸ್ವಾಧೀನಪಡಿಸಿಕೊಂಡ MDMA ಪೌಡರ್ ಮೌಲ್ಯ ಹಾಗೂ ಎಲ್ಲಾ ಸ್ವತ್ತುಗಳ ಒಟ್ಟು ಮೌಲ್ಯ ರೂಪಾಯಿ 59,545/ – ಆಗಿರುತ್ತದೆ ಎನ್ನಲಾಗಿದೆ. ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ ಎನ್.ಡಿ.ಪಿ.ಎಸ್. ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

error: No Copying!