ಬೆಂಗಳೂರು: ಅಕ್ಟೋಬರ್ 15(ಹಾಯ್ ಉಡುಪಿ ನ್ಯೂಸ್) ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿ ಮಾಜಿ ಪೋಲಿಸ್ ಅಧಿಕಾರಿ ಅಬ್ದುಲ್ ಅಜೀಂ ಅವರು ಮರು ನೇಮಕಗೊಂಡಿದ್ದಾರೆ.
ಮೇಲ್ಮನೆಯ ಮಾಜಿ ಸದಸ್ಯರೂ, ಮಾಜಿ ಪೋಲಿಸ್ ಅಧಿಕಾರಿ ಯಾಗಿದ್ದ ಅಜೀಂ ಆಯೋಗದ ಅಧ್ಯಕ್ಷರಾಗಿದ್ದು ಅವರ ಅಧಿಕಾರಾವಧಿ ಶುಕ್ರವಾರ ಕೊನೆಗೊಂಡಿದ್ದು ; ಅವರನ್ನು ಮರುನೇಮಕ ಮಾಡಿ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಆದೇಶ ಹೊರಡಿಸಿದೆ.