- ಬೈಂದೂರು: ಅಕ್ಟೋಬರ್ 16 (ಹಾಯ್ ಉಡುಪಿ ನ್ಯೂಸ್) ಅಕ್ಕ, ತಂಗಿಯ ಜಾಗದ ವಿವಾದ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವಾಗಲೇ ಜಾಗದಲ್ಲಿ ನ್ಯಾಯಾಲಯ ವನ್ನು ಧಿಕ್ಕರಿಸಿ ಅಕ್ರಮ ಕಾಮಗಾರಿ ನಡೆಸಲು ಬಂದವರನ್ನು ಪ್ರಶ್ನಿಸಿದ ಮಹಿಳೆಗೆ ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿದ ಘಟನೆ ಬೈಂದೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
- ಬೈಂದೂರು ತಾಲೂಕು ,ಕೆರ್ಗಾಲ್ ಗ್ರಾಮದ,ನಾಯ್ಕನ ಕಟ್ಟೆ, ಮಕ್ಕಿಗದ್ದೆ ಮನೆ ನಿವಾಸಿ ಲಕ್ಷ್ಮೀ ದೇವಾಡಿಗ (67) ಹಾಗೂ ಅವರ ತಂಗಿ ಕಾವೇರಿ ಎಂಬುವವರಿಗೂ ಜಾಗದ ವಿಚಾರದಲ್ಲಿ ತಗಾದೆ ಇದ್ದು ,ಈ ವಿಚಾರದಲ್ಲಿ ಸಿವಿಲ್ ನ್ಯಾಯಾಲಯದಲ್ಲಿ ದಾವೆ ದಾಖಲಿಸಿ ವಿಚಾರಣೆಯಲ್ಲಿ ಇರುತ್ತದೆ ಎಂದು ದೂರಲಾಗಿದೆ.
- ದಿನಾಂಕ : 15/10/2022 ರಂದು ಲಕ್ಷ್ಮೀ ದೇವಾಡಿಗ ಅವರ ತಂಗಿ ಕಾವೇರಿ ರವರಿಗೂ ವಿವಾದ ಇರುವ ಜಾಗದಲ್ಲಿರುವ ವಿದ್ಯುತ್ ಕಂಬದಿಂದ ಲಕ್ಷ್ಮೀ ದೇವಾಡಿಗ ಅವರ ತಂಗಿ ಕಾವೇರಿ ರವರ ಮನೆಗೆ ವಿದ್ಯುತ್ ಸರ್ವೀಸ್ ವಯರ್ ಎಳೆಯಲು ಕೆಲಸಗಾರರು ಬಂದಿದ್ದು ಇದನ್ನು ನೋಡಿದ ಲಕ್ಷ್ಮೀ ದೇವಾಡಿಗರವರು ಸ್ಥಳಕ್ಕೆ ಹೋಗಿ ತಿಮ್ಮಯ್ಯ ಎಂಬವರ ಬಳಿ ಈ ಜಾಗದಲ್ಲಿ ತಕರಾರು ಇದೆ ನ್ಯಾಯಾಲಯದಲ್ಲಿ ದಾವೆ ವಿಚಾರಣೆಯಲ್ಲಿದೆ, ನ್ಯಾಯಾಲಯದ ತೀರ್ಪು ಬರುವ ತನಕ ಯಾವುದೇ ಕೆಲಸ ಮಾಡಬೇಡಿ ಎಂದು ಹೇಳಿದ್ದಕ್ಕೆ ಲಕ್ಷ್ಮೀ ದೇವಾಡಿಗ ಜೊತೆ ತಿಮ್ಮಯ್ಯ ಜಗಳ ಪ್ರಾರಂಭಿಸಿದ್ದು ಆ ಸಮಯ ಕಾವೇರಿ ದೇವಾಡಿಗ ಮತ್ತು ಆಕೆಯ ಮಕ್ಕಳಾದ ಗಣೇಶ ದೇವಾಡಿಗ, ದಿನೇಶ್ ದೇವಾಡಿಗ ಮತ್ತು ನೆರೆಕೆರೆ ಮನೆಯ ರೇವತಿ ಎಂಬವರು ಲಕ್ಷ್ಮೀ ದೇವಾಡಿಗರ ಬಳಿ ಓಡಿ ಬಂದು ಗಣೇಶ ದೇವಾಡಿಗನು ಕಬ್ಬಿಣದ ರಾಡ್ ಹಿಡಿದುಕೊಂಡು ಲಕ್ಷ್ಮೀ ದೇವಾಡಿಗರಿಗೆ ಅವಾಚ್ಯ ಶಬ್ದಗಳಿಂದ ಬೈದು ಕಬ್ಬಿಣದ ಸರಳಿನಿಂದ ಲಕ್ಷ್ಮೀ ದೇವಾಡಿಗರ ಗಲ್ಲಕ್ಕೆ ಹೊಡೆದಿದ್ದು ಲಕ್ಷ್ಮೀ ದೇವಾಡಿಗರ ಬಾಯಲ್ಲಿ ರಕ್ತ ಬಂದಿರುತ್ತದೆ ಎಂದಿದ್ದಾರೆ. ಆ ಸಮಯ ತಿಮ್ಮಯ್ಯನು ರಕ್ತ ಬರುವಂತೆ ಹೊಡೆಯಬೇಡಿ ಎಂದು ಹೇಳಿದ್ದು ಆಗ ಎಲ್ಲರೂ ಹಿಡಿದುಕೊಂಡು ಕೈಯಿಂದ ಗುದ್ದಿರುತ್ತಾರೆ ಎಂದಿದ್ದಾರೆ. ನಂತರ ಕಾವೇರಿ ರೇವತಿ ಇಬ್ಬರೂ ಲಕ್ಷ್ಮೀ ದೇವಾಡಿಗರನ್ನು ಹಿಡಿದುಕೊಂಡು ಗಣೇಶ, ದಿನೇಶ, ತಿಮ್ಮಯ್ಯ ರವರುಗಳು ಕೈಯಿಂದ ಲಕ್ಷ್ಮೀ ದೇವಾಡಿಗರ ಬೆನ್ನಿಗೆ, ಎದೆಗೆ, ಹೊಟ್ಟೆಯ ಭಾಗಕ್ಕೆ ಗುದ್ದಿ ನೋವು ಉಂಟು ಮಾಡಿ ಇನ್ನೊಮ್ಮೆ ನಮ್ಮ ವಿಷಯಕ್ಕೆ ಬಂದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುತ್ತಾರೆ ಎಂದು ಲಕ್ಷ್ಮೀ ದೇವಾಡಿಗರವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.