Spread the love

ಉಡುಪಿ: ಅಕ್ಟೋಬರ್ 14 (ಹಾಯ್ ಉಡುಪಿ ನ್ಯೂಸ್) ತನ್ನ ಹೆಂಡತಿಗೆ ಡೈವೋರ್ಸ್ ಕೊಡು ಎಂದು ಬೆದರಿಸಿ, ಮಾನಸಿಕ ಹಿಂಸೆ ನೀಡಿ ಗಂಡನೋರ್ವ ಹಲ್ಲೆ ನಡೆಸುತ್ತಿರುವ ಬಗ್ಗೆ ನೊಂದ ಮಹಿಳೆಯೋರ್ವರು ಮಹಿಳಾ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಉಡುಪಿ , ಕುಕ್ಕಿಕಟ್ಟೆ, ಸುಬ್ರಹ್ಮಣ್ಯ ದೇವಸ್ಥಾನದ ಹತ್ತಿರದ ನಿವಾಸಿ ಶ್ರೀಮತಿ ಕುಶಾಲಾಕ್ಷಿ (43) ಇವರು ಸತೀಶ್ ಬಿ ಎಸ್ ಎಂಬವರೊಂದಿಗೆ ಮದುವೆ ಆಗಿ ಇವರಿಗೆ 12 ವರ್ಷದ  ಮಗನಿರುತ್ತಾನೆ .  ತನ್ನ ಗಂಡನಾದ ಸತೀಶ್ ಬಿ ಎಸ್   ಡೈವೋರ್ಸ್  ಕೊಡು ಎಂದು  ಬೆದರಿಕೆ ಹಾಕುತ್ತಿದ್ದು ; ಮಾನಸಿಕ ಕಿರುಕುಳ ಕೊಡುತ್ತಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಗಂಡನಾದ ಸತೀಶ್ ಬಿ ಎಸ್ ಮಗನ ಎದುರಿನಲ್ಲೇ ಕುಶಾಲಾಕ್ಷಿಯವರಿಗೆ ಅವಾಚ್ಯ ಶಬ್ದಗಳಿಂದ ಬೈದು  ಕೋಲಿನಿಂದ ಕಣ್ಣಿಗೆ ಹೊಡೆದಿರುತ್ತಾನೆ ಎಂದು ಕುಶಾಲಾಕ್ಷಿ ಯವರು ನೀಡಿದ ದೂರಿನಂತೆ ಉಡುಪಿ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

error: No Copying!