Spread the love

ಉಡುಪಿ: ಅಕ್ಟೋಬರ್ 14(ಹಾಯ್ ಉಡುಪಿ ನ್ಯೂಸ್)  ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಪ್ರಯುಕ್ತ ಉಡುಪಿ ಜಿಲ್ಲೆಯ ಎಲ್ಲಾ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ, ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಕುರಿತು ಉಡುಪಿ ಜಿಲ್ಲಾ ಪೋಲೀಸರಿಂದ ಮಾಹಿತಿಯನ್ನು ನೀಡಲಾಯಿತು

ವಿದ್ಯಾರ್ಥಿಗಳು ಮನೋ ಸ್ಥೈರ್ಯವನ್ನು ಹೆಚ್ಚಿಸಿಕೊಂಡು 

ಆತ್ಮಹತ್ಯೆಯನ್ನು ತಡೆಗಟ್ಟುವಂತೆಯೂ, ಹಾಗೂ ಗಾಂಜಾ, ಚೆರಸ್‌, ಬ್ರೌನ್‌ ಶುಗರ್‌ ಮೊದಲಾದ ಅಮಲು ಪದಾರ್ಥಗಳ ಸೇವನೆಯಿಂದ ದೂರ ವಿರುವಂತೆಯೂ ಹಾಗೂ ಇಂತಹ ಚಟಗಳಿಗೆ ಬಲಿಯಾಗದಂತೆ ತಿಳುವಳಿಕೆ ನೀಡಲಾಯಿತು.  

1.ಮಾನಸಿಕ ಖಿನ್ನತೆ.

2.ಅವಮಾನಕರ ಘಟನೆಗಳು.

3.ಪರೀಕ್ಷಾ ಸಮಯದಲ್ಲಿ ಮಕ್ಕಳಿಂದ ಅತಿಯಾದ ನಿರೀಕ್ಷೆ.

4.ಮಾಧಕ ದ್ರವ್ಯ ವ್ಯಸನಗಳು

5.ಪ್ರೇಮ ವೈಫಲ್ಯಗಳು.

6.ವೈವಾಹಿಕ ತೊಂದರೆಗಳು.

7.ದೈಹಿಕ ಖಾಯಿಲೆಗಳು.

8.ಆರ್ಥಿಕ ಸಮಸ್ಯೆಗಳು.

9.ಪ್ರೀತಿ ಪಾತ್ರ ಅಗಲುವಿಕೆಗಳು

ಈ ಮೇಲಿನ ಖಿನ್ನತೆ ಹಾಗೂ ಸಮಸ್ಯೆಗಳಿಂದ  ಬಳಲುವವರಲ್ಲದೇ  ಸಾವಿನ ಬಗ್ಗೆ ಪದೇ ಪದೇ ಮಾತನಾಡುವವರು, ಸಮಾಜದಿಂದ ವಿಮುಖರಾಗಿ ಏಕಾಂಗಿಯಾಗಿರುವವರು,  ಸಾವಿಗೆ ಬೇಕಾಗುವ ಪರಿಕರಗಳನ್ನು ಜೋಡಿಸುತ್ತಿರುತ್ತಾರೆ. ಆಸ್ತಿ ಅಥವಾ ಹಣವನ್ನು ದಾನ ಮಾಡುತ್ತಾರೆ.  ಮುಂದಿನ ಜೀವನದಲ್ಲಿ ತನಗೇನು ಉಳಿದಿಲ್ಲ, ಇನ್ನು ನನ್ನ ಜೀವನ ದಿಂದ ಏನು ಪ್ರಯೋಜನ  ಇಲ್ಲ ಎಂಬಂತೆ ಭಾಸವಾಗಿ ಮಾತನಾಡುತ್ತಿರುವುದು. ಇಂತಹ ಲಕ್ಷಣ ವುಳ್ಳ ವ್ಯಕ್ತಿಗಳು ಕಂಡು ಬಂದಲ್ಲಿ ಅಂತಹವರ ಬಗ್ಗೆ ಕಾಳಜಿ ವಹಿಸಿ ಸಂಬಂಧಪಟ್ಟ ಸಂಬಂಧಿಕರು ಅಥವಾ ಅವರ ಸ್ನೇಹಿತರಿಗೆ ಮಾಹಿತಿ ನೀಡುವಂತೆ  ಮನೋಸ್ಥೈರ್ಯವನ್ನು ಹೆಚ್ಚಿಸುವ ಕೆಲಸವನ್ನು ಮಾಡುವಂತೆ ಪ್ರೇರೇಪಿಸಲಾಯಿತು.

error: No Copying!