ಉಡುಪಿ: ಅಕ್ಟೋಬರ್ 13 (ಹಾಯ್ ಉಡುಪಿ ನ್ಯೂಸ್) ಬೇಜವಾಬ್ದಾರಿಯಿಂದ ವಾಹನ ಚಲಾಯಿಸಿ ಪ್ರತ್ಯೇಕ ಪ್ರಕರಣಗಳಲ್ಲಿ ಈರ್ವರ ಜೀವ ತೆಗೆದಿದ್ದ ವಾಹನ ಚಾಲಕರಿಗೆ ಉಡುಪಿ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ.
ದಿನಾಂಕ 28-03-2017 ರಂದು KA-20-A-5548 ನೇ ನಂಬ್ರದ ತ್ರಿಚಕ್ರ ಗೂಡ್ಸ್ ವಾಹನವನ್ನು ಅದರ ಚಾಲಕನಾದ ದಿನೇಶ್ ನಾಯಕ್ ( 45 ) ರಾಘವೇಂದ್ರ ನಿಲಯ, ಇಂದಿರಾ ನಗರ, ವಾರಂಬಳ್ಳಿ ಗ್ರಾಮ, ಉಡುಪಿ ತಾಲೂಕು ನಿವಾಸಿ ಯಾದ ಈತನು ಉಡುಪಿ ತಾಲೂಕು ಹಂದಾಡಿ ಗ್ರಾಮದ ಶ್ರೀ ಗಣೇಶ್ ಸ್ಟೋರ್ಸ್ ಎದುರು ಬಾರ್ಕೂರು-ಬ್ರಹ್ಮಾವರ ಮುಖ್ಯ ಡಾಂಬಾರು ರಸ್ತೆಯಲ್ಲಿ ಬಾರ್ಕೂರು ಕಡೆಯಿಂದ ಬ್ರಹ್ಮಾವರ ಕಡೆಗೆ ಬೇಜವಾಬ್ದಾರಿ ಯಿಂದ ಅಪಾಯಕಾರಿಯಾದ ರೀತಿಯಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿ ರಸ್ತೆಯ ತೀರ ಎಡಕ್ಕೆ ಚಲಾಯಿಸಿ ರಸ್ತೆ ದಾಟಲು ರಸ್ತೆಯ ಪೂರ್ವ ಬದಿಯ ಮಣ್ಣು ರಸ್ತೆಯಲ್ಲಿ ನಿಂತಿದ್ದ ಗೋಪಾಲ ಎನ್ನುವವರಿಗೆ ಡಿಕ್ಕಿ ಹೊಡೆದ ಪರಿಣಾಮ ಗೋಪಾಲ ಇವರು ರಸ್ತೆಗೆ ಬಿದ್ದು ತೆಲೆಗೆ ತೀವೃ ಸ್ವರೂಪದ ಪೆಟ್ಟಾಗಿ ಮೃತಪಟ್ಟಿದ್ದು ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ನಂತರ ಈ ಪ್ರಕರಣದ ತನಿಖೆಯನ್ನು ಅಂದಿನ ಬ್ರಹ್ಮಾವರ ವೃತ್ತ ನಿರೀಕ್ಷಕರಾದ ಶ್ರೀಕಾಂತ್.ಕೆ ರವರು ನಡೆಸಿ ಆರೋಪಿ ಚಾಲಕ ದಿನೇಶ ನಾಯಕ್ ಈತನ ಮೇಲೆ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು.
ಈ ಪ್ರಕರಣವು ಉಡುಪಿಯ ಮಾನ್ಯ ಒಂದನೇ ಹೆಚ್ಚುವರಿ ಸಿ.ಜೆ & ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ವಿಚಾರಣೆಯಾಗಿ ವಿಚಾರಣೆಯನ್ನು ನಡೆಸಿದ ಒಂದನೇ ಹೆಚ್ಚುವರಿ ಸಿ,ಜೆ ಮತ್ತು ಜೆ,ಎಂ,ಎಫ್,ಸಿ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಶ್ಯಾಮ್ ಪ್ರಕಾಶ್ ರವರು ಈ ಪ್ರಕರಣದ ಆರೋಪಿತನಾದ ದಿನೇಶ್ ನಾಯಕ್ ಈತನ ವಿರುದ್ಧದ ಆರೋಪವು ರುಜುವಾತಾಗಿದೆ ಎಂದು ಆರೋಪಿತನಿಗೆ 2 ವರ್ಷ 6 ತಿಂಗಳುಗಳ ಕಾರಾಗೃಹ ವಾಸದ ಶಿಕ್ಷೆ ಮತ್ತು 10,000 ರೂಪಾಯಿ ದಂಡ ರೂಪದ ಶಿಕ್ಷೆ ನೀಡಿ ದಿನಾಂಕ 07-10-2022 ರಂದು ತೀರ್ಪನ್ನು ಪ್ರಕಟಿಸಿರುತ್ತಾರೆ.
ಉಡುಪಿ: ದಿನಾಂಕ 18-10-2017 ರಂದು KA-20-4848 ನಂಬ್ರದ 407 ಟೆಂಪೋ ವಾಹನವನ್ನು ಅದರ ಚಾಲಕನಾದ ಉಮೇಶ ಪೂಜಾರಿ ( 30 ) ಹೊಸಂಗಡಿ ಗ್ರಾಮ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ ನಿವಾಸಿ ಯಾದ ಈತನು ಉಡುಪಿ ತಾಲೂಕು ಹೇರೂರು ಗ್ರಾಮದ ಮಂಜುನಾಥ ಪೆಟ್ರೋಲ್ ಬಂಕ್ ನಿಂದ ಸ್ವಲ್ಟ ಮುಂದೆ ರಾ. ಹೆ. 66 ರಲ್ಲಿ ಬ್ರಹ್ಮಾವರ ಕಡೆಯಿಂದ ಉಡುಪಿ ಕಡೆಗೆ ಪ್ರಾಣಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆಯ ಪೂರ್ವ ಬದಿಯಲ್ಲಿ ಬ್ರಹ್ಮಾವರ ಕಡೆಯಿಂದ ಉಡುಪಿ ಕಡೆಗೆ ಸುಮಾರು 60 ವರ್ಷ ಪ್ರಾಯದ ಬಿ.ರಮಾನಂದ ರಾವ್ ಎಂಬವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಸೈಕಲಿನ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಬಿ ರಮಾನಂದ ರಾವ್ ರವರು ಸೈಕಲ್ ಸಮೇತ ರಸ್ತೆಗೆ ಬಿದ್ದು ಮುಖಕ್ಕೆ ಎಡ ಬದಿಯ ಭುಜಕ್ಕೆ, ಬಲಕೈಗೆ, ಬಲಕಾಲಿಗೆ ಹಾಗೂ ತಲೆಗೆ ತೀವೃ ತರಹದ ಗಾಯವಾಗಿ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 23-10-2017 ರಂದು ನಿಧನ ಹೊಂದಿರುತ್ತಾರೆ ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ನಂತರ ಈ ಪ್ರಕರಣವನ್ನು ಅಂದಿನ ಬ್ರಹ್ಮಾವರ ವೃತ್ತದ ವೃತ್ತ ನಿರೀಕ್ಷಕರಾದ ಶ್ರೀಕಾಂತ್.ಕೆ ಇವರು ತನಿಖೆಯನ್ನು ನಡೆಸಿ ಆರೋಪಿತನಾದ ಉಮೇಶ ಪೂಜಾರಿ ಈತನ ಮೇಲೆ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು.
ಈ ಪ್ರಕರಣವು ಉಡುಪಿಯ ಮಾನ್ಯ ಒಂದನೇ ಹೆಚ್ಚುವರಿ ಸಿ.ಜೆ & ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ವಿಚಾರಣೆಯಾಗಿ ವಿಚಾರಣೆಯನ್ನು ನಡೆಸಿದ ಒಂದನೇ ಹೆಚ್ಚುವರಿ ಸಿ,ಜೆ ಮತ್ತು ಜೆ,ಎಂ,ಎಫ್,ಸಿ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಶ್ಯಾಮ್ ಪ್ರಕಾಶ್ ರವರು ಈ ಪ್ರಕರಣದ ಆರೋಪಿತನಾದ ಉಮೇಶ ಪೂಜಾರಿ ಈತನ ವಿರುದ್ಧದ ಆರೋಪವು ರುಜುವಾತಾಗಿದೆ ಎಂದು ಆರೋಪಿತನಿಗೆ 2 ವರ್ಷ 6 ತಿಂಗಳುಗಳ ಕಾರಾಗೃಹ ವಾಸದ ಶಿಕ್ಷೆ ಮತ್ತು 10,000 ರೂಪಾಯಿ ದಂಡ ರೂಪದ ಶಿಕ್ಷೆ ನೀಡಿ ದಿನಾಂಕ 27-09-2022 ರಂದು ತೀರ್ಪನ್ನು ನೀಡಿ ಆದೇಶವನ್ನು ಮಾಡಿರುತ್ತಾರೆ,