Spread the love

ಪಣಜಿ: ಅಕ್ಟೋಬರ್ 12 (ಹಾಯ್ ಉಡುಪಿ ನ್ಯೂಸ್) ಭಾರತೀಯ ನೌಕಾಪಡೆಯ ಮಿಗ್-21 ಯುದ್ಧ ವಿಮಾನವು ಬುಧವಾರ ಗೋವಾ ಕರಾವಳಿಯಲ್ಲಿ ಪತನಗೊಂಡಿದೆ ಎಂದು ನೌಕಾ ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.

ದುರಂತದಲ್ಲಿ ಪೈಲಟ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಪೈಲಟ್ ಸುರಕ್ಷಿತವಾಗಿ ಹೊರಬಂದು ಪಾರಾಗಿದ್ದಾರೆ ಎಂದು ವರದಿಯಾಗಿದೆ. 

ಈ ಘಟನೆಯ ಬಗ್ಗೆ ತನಿಖೆ ಮಾಡಲು ತನಿಖಾ ಮಂಡಳಿಗೆ (ಬಿಒಎಲ್‌) ಆದೇಶಿಸಿದೆ ಎಂದು ಭಾರತೀಯ ನೌಕಾಪಡೆ ತಿಳಿಸಿದೆ.

error: No Copying!