ಭತ್ತ ಬೆಳೆಯುವ ರೈತರಿಗಿಂತ ಅಕ್ಕಿ ಮಾರುವ – ಅನ್ನ ಮಾರುವ ವ್ಯಾಪಾರಿಗಳು ಹೆಚ್ಚು ಹಣಕಾಸಿನ ಲಾಭ ಮತ್ತು ಸಾಮಾಜಿಕ ಗೌರವ ಪಡೆಯುವ ಕಾಲಘಟ್ಟದಲ್ಲಿ…….
ವಿಶ್ವ ಆಹಾರ ದಿನ ಅಕ್ಟೋಬರ್ 16…
ಅತಿಯಾದ ಮಳೆ, ಬಹಳಷ್ಟು ಬೆಳೆಗಳ ನಾಶ ಒಂದು ಕಡೆ, ಮೀಸಲಾತಿ ಹೋರಾಟಗಳು, ಟಿಪ್ಪು ಸುಲ್ತಾನ್ – ಒಡೆಯರ್ ಹೆಸರುಗಳ ಕೆಸರೆರಚಾಟ – ಜನಸಂಖ್ಯೆಯ ನಿಯಂತ್ರಣ ಚರ್ಚೆ – ಭಾರತ್ ಜೋಡೋ ಪಾದಯಾತ್ರೆ ಹೀಗೆ ನಿರಂತರ ಸಂಘರ್ಷಮಯ ರಾಜಕೀಯ ವಾತಾವರಣದಲ್ಲಿ ಮನುಷ್ಯನ ಮೂಲಭೂತ ಅವಶ್ಯಕತೆಗಳಲ್ಲಿ ಬಹುಮುಖ್ಯವಾದ ಆಹಾರದ ಸದುಪಯೋಗದ ಬಗ್ಗೆ ಸಮಾಜ ದಿವ್ಯ ನಿರ್ಲಕ್ಷ್ಯ ತೋರುತ್ತಿದೆ.
ಧರ್ಮಗಳ ಆಧ್ಯಾತ್ಮಿಕ ಗುರುಗಳು ವಕ್ಫ್ ಆಸ್ತಿ ಬೆಳೆಸುವಲ್ಲಿ, ಚರ್ಚ್‌ಗಳನ್ನು ನಿರ್ಮಿಸುವಲ್ಲಿ, ಶಿವ – ನಾಗ ಪ್ರತಿಮೆಗಳನ್ನು ಸ್ಥಾಪಿಸುವಲ್ಲಿ ನಿರತರಾಗಿದ್ದಾರೆ. ಆಹಾರವನ್ನು ಮರೆತಿದ್ದಾರೆ. ಕೃಷಿಯನ್ನು, ರೈತರನ್ನು ನಿರ್ಲಕ್ಷಿಸಿದ್ದಾರೆ.
ಮಾಧ್ಯಮಗಳು ಬ್ರೇಕಿಂಗ್ ನ್ಯೂಸ್ ಗಳಲ್ಲಿ ಮೈ ಮರೆತಿದ್ದಾರೆ…..
ಏನಿಲ್ಲವೆಂದರೂ ಕನಿಷ್ಠ ಶೇಕಡಾ 25% ರಷ್ಟು ಆಹಾರ ಪದಾರ್ಥಗಳು ನಮ್ಮ ನಿರ್ಲಕ್ಷ್ಯ ಮತ್ತು ಅಹಂಕಾರದಿಂದ ವ್ಯರ್ಥವಾಗುತ್ತಿದೆ.
ಯುವ ಪೀಳಿಗೆಗೆ ಆಹಾರದ ಮಹತ್ವವೇ ಅರ್ಥವಾಗುತ್ತಿಲ್ಲ. ಸ್ವಿಗ್ಗಿ ಜೊಮೊಟೊಗಳೆಂಬ ಮೊಬೈಲ್ ಕಂಪ್ಯೂಟರ್ ಆಧಾರಿತ ಅಪ್ಲಿಕೇಶನ್‌ಗಳಲ್ಲಿ ಪೇಟಿಎಮ್, ಫೋನ್‌ಪೇ, ಗೂಗಲ್ ಪೇ ಮುಂತಾದ ಬ್ಯಾಂಕಿಂಗ್ ತಂತ್ರಜ್ಞಾನದ ಮುಖಾಂತರ ಹಣ ವರ್ಗಾಯಿಸಿ ಮನೆಯ ಬಾಗಿಲಿಗೆ ಇಷ್ಟ ಪಟ್ಟ ಊಟ ತಿಂಡಿಗಳನ್ನು ಸುಲಭವಾಗಿ ತರಿಸಿಕೊಂಡು ತಿಂದು ಆಹಾರದ ಪಾವಿತ್ರ್ಯವನ್ನೇ ಮರೆತಿದ್ದಾರೆ.
ಅದರ ಉತ್ಪಾದನೆ, ಹಂಚಿಕೆ, ಸಂಗ್ರಹ, ಭವಿಷ್ಯದ ಬಗ್ಗೆ ಅವರಿಗೆ ಕನಿಷ್ಠ ತಿಳಿವಳಿಕೆಯೇ ಇಲ್ಲ. ಆಡಳಿತ ವ್ಯವಸ್ಥೆ, ಮಾಧ್ಯಮಗಳು, ಅದಕ್ಕೆ ಸಂಬಂಧಿಸಿದ ಇತರರು ತುಂಬಾ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಒಮ್ಮೆ ಆಹಾರದ ಕೊರತೆ ಉಂಟಾದರೆ ಇಡೀ ದೇಶದಲ್ಲೇ ಆಹಾಕಾರ ಉಂಟಾಗುತ್ತದೆ. ಆದ್ದರಿಂದ ಕನಿಷ್ಠ ನಾವುಗಳು ಒಂದು ಎಚ್ಚರಿಕೆಯನ್ನಾದರೂ ವಹಿಸಬೇಕು. ಅದಕ್ಕಾಗಿ……
ಆತ್ಮೀಯರೇ,
ಅಕ್ಟೋಬರ್ 16 ರ ವಿಶ್ವ ಆಹಾರ ದಿನದ ಪ್ರಯುಕ್ತ ಆಹಾರ ವ್ಯರ್ಥವಾಗುವುದನ್ನು ತಡೆಯಲು ಬೆಂಗಳೂರಿನಲ್ಲಿ 3 ದಿನಗಳ ಒಂದು ಜಾಗೃತ ಕಾಲ್ನಡಿಗೆ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ.
ದಿನಾಂಕ 14/10/2022 ಶುಕ್ರವಾರ ಬೆಂಗಳೂರಿನ ರಾಜಾಜಿನಗರ, ವೆಸ್ಟ್ ಅಪ್ ಕಾರ್ಡ್ ರೋಡ್, ಬಸವೇಶ್ವರ ನಗರ, ಕಮಲಾ ನಗರ ಮಾಗಡಿ ರಸ್ತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಲ್ನಡಿಗೆಯಲ್ಲಿ ಸಂಚರಿಸುತ್ತಾ ಆಹಾರ ಸಂರಕ್ಷಣೆಯ ಭಿತ್ತಿಚಿತ್ರಗಳನ್ನು ಪ್ರದರ್ಶಿಸುತ್ತಾ, ಕರಪತ್ರ ಹಂಚುತ್ತಾ, ಕೈ ಮುಗಿದು ಕಳಕಳಿಯ ಮನವಿ ಮಾಡಿಕೊಳ್ಳುತ್ತಾ ಆಹಾರ ಉಳಿಸಿ ಹಸಿವು ನೀಗಿಸಿ ಕೃಷಿಯ ಮೇಲಿನ ಒತ್ತಡ ಕಡಿಮೆ ಮಾಡಿ ಎಂದು ಸಾಧ್ಯವಾದಷ್ಟು ಜನರಿಗೆ ಅರಿವು ಮೂಡಿಸುತ್ತಾ ಸಾಗುತ್ತೇವೆ.
ಹಾಗೆಯೇ ದಿನಾಂಕ 15/10/2022 ಶನಿವಾರ ಬೆಂಗಳೂರಿನ ಚಾಮರಾಜಪೇಟೆ, ಬಸವನಗುಡಿ, ಹನುಮಂತ ನಗರ ಬನಶಂಕರಿ ಮತ್ತು ಸುತ್ತಮತ್ತಲಿನ ಪ್ರದೇಶಗಳಲ್ಲಿ ಪಾದಯಾತ್ರೆ ಸಂಚರಿಸುತ್ತದೆ.
ಸಾಮಾಜಿಕ ಕಳಕಳಿಯ ಮತ್ತು ಆಸಕ್ತರು ಸ್ವ ಇಚ್ಛೆಯಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.
ಜೊತೆಗೆ,
ವಿಶ್ವ ಆಹಾರ ದಿನಾಚರಣೆ
ಅಕ್ಟೋಬರ್ 16,
2022 ಭಾನುವಾರ,
ಸಮಯ : ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ…..
ಚರ್ಚೆ – ಸಂವಾದ – ಮಾತುಕತೆ – ಆತ್ಮಾವಲೋಕನ…..
ಆಹಾರ ಪೋಲು – ರಾಷ್ಟ್ರೀಯ ನಷ್ಟ,
ತಿನ್ನುವ ಹಕ್ಕಿದೆ – ಬಿಸಾಡುವ ಹಕ್ಕಿಲ್ಲ,
ನಮ್ಮ ನೆಲೆಯಲ್ಲಿ ಆಹಾರ ವ್ಯರ್ಥವಾಗುವುದನ್ನು ತಡೆಯುವ ಪ್ರಯತ್ನ ಮತ್ತು ಜಾಗೃತಿಗಾಗಿ ಪ್ರಬುದ್ಧ ಮನಸ್ಸುಗಳ ಒಂದು ಸ್ಪಂದನೆ.
ದಯವಿಟ್ಟು ಸಮಯಾವಕಾಶ ಮಾಡಿಕೊಂಡು ನಿಮ್ಮವರೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ.
ಆಹಾರದ ಉಳಿತಾಯ ಎಷ್ಟು ಅವಶ್ಯಕ ಎಂದು ನಿಮಗೆ ಹೇಳುವ ಅಗತ್ಯವಿಲ್ಲ. ಅದು ನಮ್ಮೆಲ್ಲರ ಜವಾಬ್ದಾರಿ.
ಸ್ಥಳ : ಬಿ.ಬಿ.ಎಂ.ಪಿ ಪದವಿ ಪೂರ್ವ ಕಾಲೇಜು (ಮೈದಾನದ ಎದುರು) ಚಾಮರಾಜಪೇಟೆ…..
ಉಪಹಾರದ ವ್ಯವಸ್ಥೆ ಮಾಡಲಾಗುತ್ತದೆ.
ಇಲ್ಲಿ ಯಾವುದೇ ರೀತಿಯ ಹಣಕಾಸಿನ ಕೊಡುವ ಅಥವಾ ತೆಗೆದುಕೊಳ್ಳುವ ವ್ಯವಹಾರ ಇರುವುದಿಲ್ಲ.
ಕೇವಲ ಸಮಯ ಮತ್ತು ಕಾಳಜಿ ಮಾತ್ರ ನಮ್ಮದು ಮತ್ತು ನಿಮ್ಮದು….
ಪ್ರೀತಿಯಿಂದ,
ಎಂ ಯುವರಾಜ್,
80508 02019,
ಪ್ರೊಫೆಸರ್ : ರೂಪೇಶ್ ಪುತ್ತೂರು.
9448216098,
ವಿವೇಕಾನಂದ ಹೆಚ್.ಕೆ.
9844013068
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್.ಕೆ.
9844013068……