Spread the love
  • ಕಾರ್ಕಳ: ಅಕ್ಟೋಬರ್ 11( ಹಾಯ್ ಉಡುಪಿ ನ್ಯೂಸ್) ಬಜಗೋಳಿ ಪೇಟೆಯಲ್ಲಿ ಮಟ್ಕಾ ಚೀಟಿ ಬರೆಯುತ್ತಿದ್ದ ನಾಗರಾಜ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
  • ಕಾರ್ಕಳ ತಾಲೂಕು ಬಜಗೋಳಿ ಪೇಟೆಯಲ್ಲಿರುವ ಜೈನ್ ಹೋಟೇಲ್ ಪಕ್ಕದಲ್ಲಿರುವ ಸಾರ್ವಜನಿಕ ಸ್ಥಳದಲ್ಲಿ ನಾಗರಾಜ ಎಂಬಾತನು ತನ್ನ ಸ್ವಂತ ಲಾಭಕ್ಕೋಸ್ಕರ 1 ರೂ ಗೆ 70 ರೂಪಾಯಿ ನೀಡುವುದಾಗಿ  ಸಾರ್ವಜನಿಕರಿಂದ ಹಣವನ್ನು ಪಣವಾಗಿಟ್ಟು ಮಟ್ಕಾ ಜುಗಾರಿ ಆಟ ಆಡುತ್ತಿದ್ದಾನೆಂದು ದಿನಾಂಕ 10/10/2022ರಂದು ಕಾರ್ಕಳ ಗ್ರಾಮಾಂತರ ಪೊಲೀಸರಿಗೆ ಸಾರ್ವಜನಿಕರಿಂದ ಬಂದ ಖಚಿತ ಮಾಹಿತಿಯಂತೆ ಪೊಲೀಸರು ಸ್ಥಳಕ್ಕೆ ಸಂಜೆ ದಾಳಿ ನಡೆಸಿ ಮಿಯ್ಯಾರು ಗ್ರಾಮದ ಕಂಬಳದ ಬಳಿ ನಿವಾಸಿ ನಾಗರಾಜ (32) ಎಂಬವನನ್ನು ವಶಕ್ಕೆ ಪಡೆದು ಆತನ ವಶದಲ್ಲಿದ್ದ ಮಟ್ಕಾ ಜುಗಾರಿ  ಆಟದಿಂದ ಸಂಗ್ರಹಿಸಿದ  ನಗದು ರೂಪಾಯಿ 1315 ಮಟ್ಕಾ ಬರೆದ ಚೀಟಿ ಮತ್ತು ಬಾಲ್‌ಪೆನ್‌-01 ನ್ನು ‌ ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ
error: No Copying!