Spread the love

ಅಮಾಸೆಬೈಲು: ಅಕ್ಟೋಬರ್ 12 ( ಹಾಯ್ ಉಡುಪಿ ನ್ಯೂಸ್) ಪತಿಯೋರ್ವ ಪತ್ನಿ, ಮಕ್ಕಳಿಗೆ ಮೋಸ, ವಂಚನೆ ಮಾಡಿ ಪತ್ನಿ ನ್ಯಾಯ ಕೇಳಲು ಬಂದಾಗ ಬೆದರಿಸಿ ಜೀವ ಬೆದರಿಕೆ ಹಾಕಿರುವ ಬಗ್ಗೆ ದೂರು ದಾಖಲಾಗಿದೆ.

ಉಡುಪಿ ತಾಲೂಕು ,ಪೆರಂಪಳ್ಳಿಯ ಯೂರೋ ಲೀವಿಂಗ್ ಅಪಾರ್ಟ್ ಮೆಂಟ್ ನ ನಿವಾಸಿ ಶ್ರೀಮತಿ ಸುಪ್ರೀತಾ ಎಸ್ ಶೆಟ್ಟಿ ಇವರು  ದಿನಾಂಕ 14-04-1993 ರಂದು  ಬೆಳಂಜೆ ಶಿವಾನಂದ ಶೆಟ್ಟಿ ಎಂಬವನನ್ನು ಬೆಳ್ವೆ ಶಂಕರ ನಾರಾಯಣ ದೇವಸ್ಥಾನದಲ್ಲಿ ಮದುವೆಯಾಗಿದ್ದು  ವಿವಾಹವಾದ ಬಳಿಕ 13 ವರ್ಷಗಳ ಕಾಲ ಮಡಾಮಕ್ಕಿಯ ಕಬ್ಬಿನಾಲೆ ಎಂಬಲ್ಲಿ ಇವರು ವಾಸವಾಗಿದ್ದು ಅವರಿಗೆ ಇಬ್ಬರು ಗಂಡು ಮಕ್ಕಳಿರುತ್ತಾರೆ ಎನ್ನಲಾಗಿದೆ.

ಮದುವೆಯಾದ ನಂತರ ಪತಿ ಶಿವಾನಂದ ಶೆಟ್ಟಿ ತನ್ನ ಪತ್ನಿ ಯಾದ ಸುಪ್ರೀತಾ ಎಸ್ ಶೆಟ್ಟಿಯನ್ನು ನಿರ್ಲಕ್ಷಿಸುತ್ತಾ ಬಂದಿದ್ದು ತನ್ನ ಮಕ್ಕಳ ಮೇಲೆ  ಯಾವುದೇ ಪ್ರೀತಿ ಕಾಳಜಿ ತೋರುತ್ತಿರಲಿಲ್ಲ ಎಂದು ಸುಪ್ರೀತಾ ಎಸ್ ಶೆಟ್ಟಿ ಆರೋಪಿಸಿದ್ದಾರೆ. . ನಂತರ ಶಿವಾನಂದ ಶೆಟ್ಟಿಯು ಹಾಸನದಲ್ಲಿ 2008 ರಿಂದ 2012 ರವರೆಗೆ ಹೊಟೇಲು ಉದ್ಯಮ ನಡೆಸುತ್ತಿದ್ದು ಆ ಸಮಯ ಕೆಲವು ಅನೈತಿಕ ವ್ಯವಹಾರಗಳನ್ನು ಹೊಂದಿದ್ದು ಈ ಬಗ್ಗೆ ಸುಪ್ರೀತಾ ಎಸ್ ಶೆಟ್ಟಿ ಯವರು ತನ್ನ ಗಂಡ ಶಿವಾನಂದ ಶೆಟ್ಟಿಗೆ ಎಚ್ಚರಿಸಿದರೂ ಸಹ ಶಿವಾನಂದ ಶೆಟ್ಟಿ ಪತ್ನಿಯ ಮಾತಿಗೆ ಬೆಲೆ ಕೊಡದೆ ತಾತ್ಸಾರ ಭಾವನೆಯಿಂದ ನೋಡಿಕೊಂಡು ಬರುತ್ತಿದ್ದು ಹಾಗೂ ಪ್ರತಿಯೊಂದು ವಿಷಯದಲ್ಲಿ ನಿರ್ಲಕ್ಷಿಸುತ್ತಾ ಬಂದಿದ್ದು ಗಂಡ ಶಿವಾನಂದ ಶೆಟ್ಟಿಯ ಅನೈತಿಕ ವ್ಯವಹಾರದ ಬಗ್ಗೆ ಸಾಕಷ್ಟು ಜಗಳಗಳಾಗಿರುತ್ತದೆ ಎಂದು ದೂರಿದ್ದಾರೆ .

ಶಿವಾನಂದ ಶೆಟ್ಟಿಯು ತನ್ನ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಸಹ ಯಾವುದೇ ಸಹಾಯ ಮಾಡಿರುವುದಿಲ್ಲ. ಈ ಮಧ್ಯೆ ದಿನಾಂಕ 18-06-2022 ರ ದಿನಪತ್ರಿಕೆಯಲ್ಲಿ ಶಿವಾನಿ ಎಂಬ ಹೆಸರಿನ ಹುಡುಗಿ ಯೋಗಾಸನ ಸ್ಪರ್ಧೆಯಲ್ಲಿ ಸಾಧನೆ ಮಾಡಿದ ಬಗ್ಗೆ ಪ್ರಕಟಣೆ ಬಂದಿದ್ದು ಆ ಹುಡುಗಿಯ ತಂದೆ ಶಿವಾನಂದ ಶೆಟ್ಟಿ ಹಾಗೂ ತಾಯಿ ಸುಜಾತಾ ಶೆಟ್ಟಿ ಎಂದು ತಿಳಿದು ಬಂದಿದ್ದು ಇದರಿಂದ ಸುಪ್ರೀತಾ ಎಸ್ ಶೆಟ್ಟಿ ನೊಂದು ಪತಿ ಶಿವಾನಂದ ಶೆಟ್ಟಿಗೆ ಪೋನು ಕರೆ ಮಾಡಿದ್ದು ಈ ವಿಷಯದಲ್ಲಿ ಪ್ರಶ್ನಿಸಿದರೆ ಕೊಲೆ ಮಾಡುವುದಾಗಿ ಶಿವಾನಂದ ಶೆಟ್ಟಿ ಜೀವ ಬೆದರಿಕೆ ಹಾಕಿದ್ದು ಅಲ್ಲದೆ ದಿನಾಂಕ 14-09-2022 ರಂದು ಸುಪ್ರೀತಾ ಎಸ್ ಶೆಟ್ಟಿ ಯವರು ಅನಸೂಯ ಶೆಟ್ಟಿ, ಬಿ.ಎನ್ ಶ್ರೀನಿವಾಸ, ಆರುಂಧತಿ ಶೆಟ್ಟಿ, ಬಾಲಕ್ರಷ್ಣ ಶೆಟ್ಟಿ, ಸುಶೀಲಾ ಶೆಟ್ಟಿ ಯವರು ವಾಸವಿರುವ ಗಂಡನ ಮನೆಯಾದ ಬೆಳಂಜೆಗೆ ಹೋದಾಗ ಶಿವಾನಂದ ಶೆಟ್ಟಿ ಹಾಗೂ ಸುಜಾತಾ ಶೆಟ್ಟಿ ಯವರು ಮಾಡಿರುವ ಅನೈತಿಕ ವ್ಯವಹಾರವೇ ಸರಿ ಎಂಬಂತೆ ಇವರೆಲ್ಲರೂ ಮಾತನಾಡಿ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದಲ್ಲಿ ಸುಪ್ರೀತಾ ಎಸ್ ಶೆಟ್ಟಿ ಹಾಗೂ ಅವರ ಮಕ್ಕಳ ಜೀವನ ನೆಟ್ಟಗಾಗಲು ಬಿಡುವುದಿಲ್ಲವೆಂದು ಜೀವ ಬೆದರಿಕೆ ಹಾಕಿದ್ದು ; ಸುಶೀಲಾ ಶೆಟ್ಟಿ ಯು ಸುಜಾತಾ ಶೆಟ್ಟಿಯೊಂದಿಗೆ ಶಿವಾನಂದ ಶೆಟ್ಟಿಯ ಮದುವೆ ಮಾಡಿಸಿದ್ದಾಗಿ ತಿಳಿಸಿದ್ದು  ಶಿವಾನಂದ ಶೆಟ್ಟಿಯು  ಸುಪ್ರೀತಾ ಎಸ್ ಶೆಟ್ಟಿ ಯವರಿಗೆ ತಿಳಿಯದಂತೆ ಸುಜಾತಾ ಶೆಟ್ಟಿಯೊಂದಿಗೆ ಮದುವೆಯಾಗಿದ್ದು ಉಳಿದವರೆಲ್ಲರೂ ಶಿವಾನಂದ ಶೆಟ್ಟಿ ಹಾಗೂ ಸುಜಾತಾ ಶೆಟ್ಟಿ ಗೆ ಸಹಾಯ ಮಾಡಿ ,ಪ್ರಶ್ನಿಸಲು ಬಂದ ಸುಪ್ರೀತಾ ಎಸ್ ಶೆಟ್ಟಿಯವರಿಗೆ ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿದ್ದು ಹಾಗೂ  ಶಿವಾನಂದ ಶೆಟ್ಟಿಯು ಆಸ್ತಿಯನ್ನು ಮಾರಾಟ ಮಾಡಿ ಸುಪ್ರೀತಾ ಎಸ್ ಶೆಟ್ಟಿ ಗೂ ಆಕೆಯ ಮಕ್ಕಳಿಗೂ ಮೋಸ ಮಾಡಿರುತ್ತಾನೆ ಎಂದು ನೀಡಿದ ದೂರಿನಂತೆ ಅಮಾಸೆಬೈಲು  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

error: No Copying!