ಉಡುಪಿ: ಅಕ್ಟೋಬರ್ 5(ಹಾಯ್ ಉಡುಪಿ ನ್ಯೂಸ್) ಒಂಟಿ ವ್ರಧ್ಧೆ ಮಹಿಳೆಯೋರ್ವರ ಕುತ್ತಿಗೆಯಿಂದ ಚಿನ್ನದ ಸರವನ್ನು ದೋಚಿದ ಘಟನೆ ಕುಂಜಿಬೆಟ್ಟು ಪರಿಸರದಲ್ಲಿ ನಡೆದಿದೆ.
ಶಿವಳ್ಳಿ ಗ್ರಾಮದ ಕುಂಜಿಬೆಟ್ಟು,ಎಂಜಿಎಂ ಗ್ರೌಂಡ್ ಹಿಂಭಾಗದ ಸಾಯಿರಾಧಾ ನೆಸ್ಟ್ ನಿವಾಸಿ ಶ್ರೀಮತಿ ಪ್ರೇಮಾ ಶೇಣವ (62) ಉಡುಪಿ ಇವರು ದಿನಾಂಕ 03/10/2022 ರಂದು ಸಂಜೆ ಕಡಿಯಾಳಿ ಮಹಿಷಮರ್ಧಿನಿ ದೇವಸ್ಥಾನಕ್ಕೆ ಹೋಗಿ, ವಾಪಾಸು ಮನೆ ಕಡೆಗೆ ಒಬ್ಬರೇ ನಡೆದುಕೊಂಡು ಹೋಗುವಾಗ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಎಂಜಿಎಂ ಕಾಲೇಜು ಮೈದಾನದ ಗೇಟಿನ ಎದುರು ತಲುಪುವಾಗ ಅಂದಾಜು 25 ರಿಂದ 30 ವರ್ಷ ಪ್ರಾಯದ ಓರ್ವ ಅಪರಿಚಿತ ಯುವಕನು ಏಕಾಏಕಿ ಹಿಂದಿನಿಂದ ಬಂದು ಶ್ರೀಮತಿ ಪ್ರೇಮಾ ಶೇಣವ ರವರನ್ನು ಕೈಗಳಿಂದ ಗಟ್ಟಿಯಾಗಿ ಹಿಡಿದು, ಅವರ ಕುತ್ತಿಗೆಗೆ ಕೈ ಹಾಕಿ, ಕುತ್ತಿಗೆಯಲ್ಲಿದ್ದ ಅಂದಾಜು 50 ಗ್ರಾಂ ತೂಕದ ಚಿನ್ನದ ಪಕಳದ ಸರವನ್ನು ಎಳೆದು ಕೊಂಡು ಹೋಗಿದ್ದು, ಚಿನ್ನದ ಸರದ ಮೌಲ್ಯ ರೂ. 2,30,000/- ಆಗಿದೆಯೆಂದು ಶ್ರೀಮತಿ ಪ್ರೇಮಾ ಶೇಣವರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.