ಅಂತೂ ಇಂತೂ ಗಾಂಧಿ ವೈರುಧ್ಯಗಳ
ನಡುವೆ ಹುಟ್ಟಿದ ಹಬ್ಬ ಮುಗಿಯಿತು
ಸಾವಿನಲ್ಲೂ ನೀವೆಲ್ಲರೂ ನಗು ಬೆರಸಿದರಷ್ಟೇ;
ಅರೆ ಬೆತ್ತಲೆಯ ಹೂ ಮನಸ್ಸ ಫಕೀರ
ಜಗದ ಜನರೊಳಗಿನ ಮನಸ್ಸಲ್ಲಿದ್ದ
ನಂಜನ್ನು ಬೆತ್ತಲೆ ಮಾಡಿ ಹೊರಟ;
ಹೂ ಗುಚ್ಚ ನೀಡಿದರೂ ಅಷ್ಟೇ
ತುಚ್ಛವಾಗಿ ಉಗಿದರೂ ಇಷ್ಟೇ
ಅವನೊಂದು ಆಗಸ ಅಲ್ಲಲ್ಲಿ ಕರಿ ನೆರಳುಂಟು;
ತನ್ನವನ್ನನ್ನೇ ಕೊಂದವನಿಗೆ ಕ್ಷಮೆಯುಂಟು
ನಾ ಕೊಲ್ಲಲಿಲ್ಲ ಕೇಳಿದವರಿಗೆ ಕ್ಷಮಿಸಿದನಷ್ಟೇ
ಕೊಂದವನನ್ನು ಪೂಜಿಸಿ ನನ್ನನ್ನೇ ತೆಗಳಿದರು;
ಅವನ ಆಟ ಮುಗಿದಿದೆ ಲೋಕದಲ್ಲಿ
ಎತ್ತಣಿಂದೆತ್ತ ಎಳೆದರೂ ಉಳಿಯುವುದು
ಆ ಮಗ್ಧ ನಗುವಿಗೆ ಕಹಿ ಬೆರಸಿದರಷ್ಟೆ;
ಮತ್ತೆ ಮರಳಿ ಮರಳಿ ಬರುವೆನೆಂದಿಗೂ
ಎದೆಗೆ ಹಿರಿದವನಿಗೂ ಹೇ ರಾಮ್ ಕ್ಷಮಿಸಿಬಿಡೆಂದೆ
ಮರೆತು ಕ್ಷಮಿಸಿ ಬಿಟ್ಟರೇ ನೀವೇ ಮಹಾತ್ಮ
ಅವನು ಒಬ್ಬ ನೂರಾರು ಕೋಟಿಯಲ್ಲಿ
ತೆಗಳಿದರೆ ಜಗದಲ್ಲೆಲ್ಲಾ ಸ್ಥಾವರಗಳುಂಟು
ಉಗಿದು ಉರುಳಿಸಿಬಿಡಿ ಮತ್ತೆ ಬರುವೆನೆಂದಿಗೂ
– ದಿವಾಕರ್ ಡಿ. ಮಂಡ್ಯ