ಶಂಕರನಾರಾಯಣ: ಸೆಪ್ಟೆಂಬರ್ 24(ಹಾಯ್ ಉಡುಪಿ ನ್ಯೂಸ್) ಕುಡುಕ ಮಗನೋರ್ವ ತಾಯಿಯನ್ನೇ ಮಾರಣಾಂತಿಕವಾಗಿ ಹೊಡೆದು ಕೊಂದ ಘಟನೆ ಶಂಕರನಾರಾಯಣ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕುಂದಾಪುರ ತಾಲೂಕು ,76 ಹಾಲಾಡಿ ಗ್ರಾಮದ,ಕಾಸಾಡಿ ಕಾರಿಮನೆ ನಿವಾಸಿ ಶ್ರೀಮತಿ ನಾಯ್ಕ ಇವರ ಅಮ್ಮ ಶ್ರೀಮತಿ ಪಾರ್ವತಿ (47 ) ಇವರು ಕುಂದಾಪುರ ತಾಲೂಕಿನ 76 ಹಾಲಾಡಿ ಗ್ರಾಮದ ಕಾಸಾಡಿ ಕಾರಿಮನೆ ಎಂಬಲ್ಲಿ ಅವರ ಮಗ ಕೃಷ್ಣ ನಾಯ್ಕ ಎಂಬವನೊಂದಿಗೆ ವಾಸವಾಗಿದ್ದು, ಮಗ ಕೃಷ್ಣ ನಾಯ್ಕ ಈತನು ಯಾವಾಗಲೂ ತನ್ನ ತಾಯಿ ಪಾರ್ವತಿ ಯವರೊಂದಿಗೆ ಗಲಾಟೆ ಮಾಡಿ ಹೊಡೆಯುತ್ತಿದ್ದನು ಎಂದು ದೂರಿದ್ದಾರೆ. ಈ ಸಮಯ ಪಾರ್ವತಿ ಯವರು ತನ್ನ ಮಗಳ ಮನೆಯಲ್ಲಿ ಇದ್ದು, ಮತ್ತೆ ಪುನಃ ವಾಪಾಸು ಹೋಗಿ ಮಗ ಕೃಷ್ಣನೊಂದಿಗೆ ಇರುತ್ತಿದ್ದರು, ದಿನಾಂಕ 19/09/2022 ರಂದು ಸಂಜೆ ಸುಮಾರು 6:30 ಘಂಟೆಗೆ ಕ್ರಷ್ಣ ನಾಯ್ಕ ನು ಶ್ರೀಮತಿ ನಾಯ್ಕ ರಿಗೆ ಕರೆ ಮಾಡಿ ಶ್ರೀಮತಿ ನಾಯ್ಕ ರ ಮನೆಗೆ ಬಂದು ಅಮ್ಮ ಪಾರ್ವತಿ ಯವರು ನಿನ್ನೆ ದಿನ ದಿನಾಂಕ 18/09/2022 ರಂದು ರಾತ್ರಿ ಸುಮಾರು 8:30 ಗಂಟೆಗೆ ಶರಾಬು ಕುಡಿದುಕೊಂಡು ಮನೆಯ ಒಳಗಿನ ಅಡಿಗೆ ಕೋಣೆಯಲ್ಲಿ ಕುಸಿದು ಕಡೆಯುವ ಕಲ್ಲಿನ ಮೇಲೆ (ರುಬ್ಬುವ ಕಲ್ಲು) ಬಿದ್ದ ಕಾರಣ ತಲೆಗೆ ರಕ್ತಗಾಯವಾಗಿದ್ದು, ಅವಳು ಮಾತನಾಡುವುದಿಲ್ಲ ಎಂದು ಹೇಳಿದ್ದು, ನಂತರ ಚಿಕಿತ್ಸೆಯ ಬಗ್ಗೆ ಶ್ರೀ ಮತಿ ನಾಯ್ಕ ರ ಗಂಡ ಹಾಗೂ ಕ್ರಷ್ಣ ನಾಯ್ಕ ಹಾಲಾಡಿ ತನಕ ಆಟೋರಿಕ್ಷಾದಲ್ಲಿ ಬಂದು ಅಲ್ಲಿಂದ ಪವನ್ ಎಂಬರೊಂದಿಗೆ ಸೇರಿ 108 ಅಂಬುಲೆನ್ಸ ವಾಹನದಲ್ಲಿ ಕುಂದಾಪುರದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಿನಾಂಕ 19/09/2022 ರಂದು , 11:30 ಗಂಟೆಗೆ ಪಾರ್ವತಿ ಇವರನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಬಗ್ಗೆ ದಾಖಲು ಮಾಡಿರುತ್ತೇವೆ ಎಂದು ಮಗಳು ಪೋಲಿಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಅಲ್ಲಿ ತೀವ್ರ ವಾಗಿ ಗಾಯಗೊಂಡಿದ್ದ ಶ್ರೀಮತಿ ಪಾರ್ವತಿ ಇವರು ಪ್ರಜ್ಜಾ ಹೀನ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 22/09/2022 ರಂದು ರಾತ್ರಿ 11:12 ಗಂಟೆಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಮಗಳು ಶ್ರೀಮತಿ ನಾಯ್ಕ ದೂರಿದ್ದಾರೆ. ಕೃಷ್ಣ ನಾಯ್ಕನು ತಾಯಿ ಶ್ರೀಮತಿ ಪಾರ್ವತಿ ಇವರ ತಲೆಗೆ ಹೊಡೆದು ಸಾಯಿಸಿರುತ್ತಾನೆ ಎಂದು ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿರುತ್ತದೆ.