ಕೋಟ: ಸೆಪ್ಟೆಂಬರ್ 24 (ಹಾಯ್ ಉಡುಪಿ ನ್ಯೂಸ್) ಸಾಸ್ತಾನ ಪರಿಸರದಲ್ಲಿ ಗಾಂಜಾ ಸೇವನೆ ಮಾಡಿದ್ದ ಯುವಕನನ್ನು ಪೋಲಿಸರು ಬಂಧಿಸಿದ್ದಾರೆ.
ಕೋಟ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕ (ತನಿಖೆ) ರಾದ ಪುಷ್ಪಾ ರವರು ದಿನಾಂಕ 23-09-2022 ರಂದು ರೌಂಡ್ಸ್ ಕರ್ತವ್ಯದಲ್ಲಿರುವಾಗ ಬ್ರಹ್ಮಾವರ ತಾಲೂಕು ಗುಂಡ್ಮಿ ಗ್ರಾಮದ ಸಾಸ್ತಾನ ಜಂಕ್ಷನ್ ನಲ್ಲಿ ಆಫ್ವಾನ್ ಎಂಬಾತ ಸಂಶಯಾಸ್ಪದವಾಗಿ ವರ್ತಿಸುತ್ತಿದ್ದು ಆತನ ಬಾಯಿಯಿಂದ ಅಮಲು ಪದಾರ್ಥ ಸೇವನೆಯಂತಹ ವಾಸನೆ ಬರುತ್ತಿದ್ದು, ಅವನಲ್ಲಿ ಪೋಲಿಸರು ವಿಚಾರಿಸಿದಾಗ ತಾನು ಗಾಂಜಾ ಸೇವನೆ ಮಾಡಿರುವುದಾಗಿ ತಿಳಿಸಿರುತ್ತಾನೆ. ಅತನನ್ನು ವಶಕ್ಕೆ ತೆಗೆದುಕೊಂಡು ಕುಂದಾಪುರ ಮಾತಾ ಆಸ್ಪತ್ರೆಯ ವೈದ್ಯಾಧಿಕಾರಿಯವರ ಮುಂದೆ ಹಾಜರುಪಡಿಸಿ ವೈದ್ಯಕೀಯ ಪರೀಕ್ಷೆ ನಡೆಸಿದ್ದು, ಆಫ್ವಾನ್ ಗಾಂಜಾ ಸೇವನೆ ಮಾಡಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕಲಂ: 27(B)NDPS ACT ರಂತೆ ಪ್ರಕರಣ ದಾಖಲಾಗಿರುತ್ತದೆ.