ಉಡುಪಿ: ಸೆಪ್ಟೆಂಬರ್ 11(ಹಾಯ್ ಉಡುಪಿ ನ್ಯೂಸ್) ಮನೆ ಯ ಮುಖ್ಯ ದ್ವಾರದ ಬೀಗ ಮುರಿದು ,ಕಳ್ಳರು ದೇವರ ಪೂಜೆಯ ಬೆಳ್ಳಿ ಸಾಮಾಗ್ರಿಗಳನ್ನು ಕಳ್ಳತನ ನಡೆಸಿದ ಘಟನೆ ಕುಂಜಿಬೆಟ್ಟು ವಿನಲ್ಲಿ ನಡೆದಿದೆ.
ವೈಷ್ಣವಿ ಮಡಿ (20) ತಂದೆ: ಸುರಾಲು ನಾರಾಯಣ ಮಡಿ ,ಮನೆ ನಂಬ್ರ: 8-1-43ಬಿ, ಎಲ್‌ಎಲ್‌ಆರ್ ಮಾರ್ಗ, ಕುಂಜಿಬೆಟ್ಟು, ಶಿವಳ್ಳಿ ಗ್ರಾಮ ,ಉಡುಪಿ ಇವರ ತಂದೆ-ತಾಯಿ ಕುಟುಂಬಸ್ಥರೊಂದಿಗೆ ನೇಪಾಳಕ್ಕೆ ಪ್ರವಾಸ ಹೋಗಿದ್ದು, 10/09/2022 ರಂದು ರಾತ್ರಿ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಕುಂಜಿಬೆಟ್ಟು ಎಲ್‌ಎಲ್‌ಆರ್ ಮಾರ್ಗದಲ್ಲಿರುವ ಮನೆ ನಂಬ್ರ: 8-1-43ಬಿ ಮನೆಯ ಮುಖ್ಯದ್ವಾರದ ಬಾಗಿಲನ್ನು ಯಾರೋ ಕಳ್ಳರು ಯಾವುದೋ ಆಯುಧದಿಂದ ಮುರಿದು ಒಳಪ್ರವೇಶಿಸಿ, ಮನೆಯ ದೇವರ ಕೋಣೆಯಲ್ಲಿದ್ದ 500 ಗ್ರಾಂ ತೂಕದ ಬೆಳ್ಳಿಯ ದೇವರ ಪೀಠ, 50 ಗ್ರಾಂ ತೂಕದ ಬೆಳ್ಳಿಯ ಸಣ್ಣ ತಟ್ಟೆ, 150 ಗ್ರಾಂ ತೂಕದ ಬೆಳ್ಳಿಯ ಅರಶಿನ ಕುಂಕುಮ ಬೌಲ್, 20 ಗ್ರಾಂ ತೂಕದ ಬೆಳ್ಳಿಯ ಸಣ್ಣ ಕುಂಕುಮ ಕರಡಿಗೆ, 25 ಗ್ರಾಂ ತೂಕದ ಬೆಳ್ಳಿಯ ಗಣಪತಿಯ ಪೀಠ ಸೇರಿ ಒಟ್ಟು 845 ಗ್ರಾಂ ತೂಕದ ಬೆಳ್ಳಿ ಸಾಮಾಗ್ರಿಗಳು ಮತ್ತು ಸಿಸಿ ಟಿವಿ ಡಿವಿಆರ್, ವೈಪೈ ರೂಟರ್ ನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸೊತ್ತುಗಳ ಅಂದಾಜು ಮೌಲ್ಯ ರೂಪಾಯಿ 64,000/- ಆಗಬಹುದುದಾಗಿದೆ ಎಂದು ದೂರು ನೀಡಿದ್ದು, ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.