Spread the love

ಉಡುಪಿ: ಸೆಪ್ಟೆಂಬರ್ 4 (ಹಾಯ್ ಉಡುಪಿ ನ್ಯೂಸ್) ಗಾಂಜಾ ಪ್ರಕರಣದಲ್ಲಿ ಉಡುಪಿ ಜಿಲ್ಲಾ ಸೆನ್ ಅಪರಾಧ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ಆರೋಪಿಗೆ ನ್ಯಾಯಾಲಯ 3ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ.

ಉಡುಪಿ ಜಿಲ್ಲಾ CEN ಅಪರಾಧ ಪೊಲೀಸ್ ಠಾಣೆಯಲ್ಲಿ ದಿನಾಂಕ 05/09/2020 ರಂದು ಎನ್.ಡಿ.ಪಿ.ಎಸ್. ಕಾಯ್ದೆಯಂತೆ ಗಾಂಜಾ ಪ್ರಕರಣ ದಾಖಲಾಗಿರುತ್ತದೆ. ಈ ಗಾಂಜಾ ಪ್ರಕರಣದಲ್ಲಿ ಅರ್ಫನ್, ಪ್ರಾಯ 27  ವರ್ಷ, ವಾಸ : ಅರ್ಫನ್ ಮಂಜಿಲ್, ಹೂಡೆ ಅಂಚೆ, ಪಡುತೋನ್ಸೆ ಗ್ರಾಮ, ಉಡುಪಿ ತಾಲೂಕು ಎಂಬವನು ಆರೋಪಿಯಾಗಿದ್ದು, ಆರೋಪಿಯಿಂದ 1 ಕೆಜಿ, 048 ಗ್ರಾಂ ತೂಕದ ಗಾಂಜಾವನ್ನು ಸ್ವಾಧೀನಪಡಿಸಲಾಗಿರುತ್ತದೆ. ಈ ಪ್ರಕರಣದಲ್ಲಿ ಅಂದಿನ ಸೆನ್ ಅಪರಾಧ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ರಾಮಚಂದ್ರ ನಾಯಕ್ ರವರು ದೂರು ದಾರರಾಗಿದ್ದು, ಪಿಎಸ್‌ಐ ಶ್ರೀ ಲಕ್ಷ್ಮಣ ರವರು ಈ ಪ್ರಕರಣದಲ್ಲಿ ದೋಷಾರೋಪಣಾ ಪತ್ರವನ್ನು ತಯಾರಿಸಿರುತ್ತಾರೆ.      ದಿನಾಂಕ: 03/09/2022 ರಂದು  ಆರೋಪಿ ಅರ್ಫನ್ ರವರಿಗೆ 3 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ರೂಪಾಯಿ 30,000/- ದಂಡ ವಿಧಿಸಿದ್ದು, ಪಾವತಿಸಲು ತಪ್ಪಿದಲ್ಲಿ 6 ತಿಂಗಳ ಸರಳ ಕಾರಾಗೃಹ ವಾಸ ವಿಧಿಸಿ, ಉಡುಪಿಯ ಮಾನ್ಯ ಪ್ರಧಾನ ಮತ್ತು ಜಿಲ್ಲಾ ವಿಶೇಷ ನ್ಯಾಯಾಧೀಶರಾದ ಶ್ರೀ ಶಾಂತವೀರ ಶಿವಪ್ಪರವರು ತೀರ್ಪು ನೀಡಿರುತ್ತಾರೆ. ಪ್ರಾಸಿಕ್ಯೂಶನ್ ಪರವಾಗಿ ಶ್ರೀಮತಿ ಶಾಂತಿಬಾಯಿ ರವರು ವಾದ ಮಂಡನೆಯನ್ನು ಮಾಡಿರುತ್ತಾರೆ. ಸದ್ರಿ ಗಾಂಜಾ ಪ್ರಕರಣದಲ್ಲಿ ಉತ್ತಮ ಕಾರ್ಯನಿರ್ವಹಿಸಿದ ಬಗ್ಗೆ ಮಾನ್ಯ ಪೊಲೀಸ್ ಅಧೀಕ್ಷಕರು ಇಲಾಖೆಯ ಕಾರ್ಯ ವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ.

error: No Copying!