ಬ್ರಹ್ಮಾವರ: ಸಪ್ಟೆಂಬರ್ ೩ (ಹಾಯ್ ಉಡುಪಿ ನ್ಯೂಸ್) ಬ್ಯಾಂಕ್ ಉದ್ಯೋಗಿಯೋರ್ವ ಮದುವೆಯಾಗಿ ಹೆಂಡತಿ ಯೊಂದಿಗೆ ಸರಿಯಾಗಿ ಸಂಸಾರ ನಡೆಸದೆ ಕೇವಲ ವರದಕ್ಷಿಣೆ ಹಣಕ್ಕಾಗಿ ತನ್ನ ಮನೆಯವರೊಂದಿಗೆ ಸೇರಿ ಪತ್ನಿಯನ್ನು ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸಿಸಿ ಕೊಲೆ ಬೆದರಿಕೆ ಹಾಕಿರುವ ಬಗ್ಗೆ ದೂರು ದಾಖಲಾಗಿದೆ.
ಬ್ಯಾಂಕ್ ಉದ್ಯೋಗಿ ಪ್ರಜ್ಞಾ.ಜೆ ಇವರು ದಿನಾಂಕ: 21.11.2021 ರಂದು ಕೊಕ್ಕರ್ಣೆಯ ಭರತ್ ರಾಜ್ ನೊಂದಿಗೆ ಹಿರಿಯರ ಒಪ್ಪಿಗೆಯಿಂದ ಪೆರ್ಡೂರಿನ ಅನಂತ ಸೌರಭ ಹಾಲ್‌ನಲ್ಲಿ ಮದುವೆಯಾಗಿದ್ದು, ಅವನು ಪ್ರಸ್ತುತ ಪೇತ್ರಿ ಎಸ್‌ಸಿಡಿಸಿಸಿ ಬ್ಯಾಂಕಿನಲ್ಲಿ ಗುಮಾಸ್ತನಾಗಿದ್ದು, ಪ್ರಜ್ನಾರವರು ಬೆಳುವಾಯಿ ಎಸ್‌ಸಿಡಿಸಿಸಿ ಬ್ಯಾಂಕಿನಲ್ಲಿ ಗುಮಾಸ್ತೆಯಾಗಿ ಕೆಲಸ ಮಾಡಿಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ.
ಮದುವೆಯ ಸಮಯ ಪ್ರಜ್ನಾರವರ ತವರು ಮನೆಯಿಂದ 20 ಪವನ್ ಚಿನ್ನ ಹಾಗೂ 10 ಲಕ್ಷ ಹಣ ಮತ್ತು ಮದುವೆಯ ಖರ್ಚುವೆಚ್ಚ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ.ಮದುವೆಯ ಮುಂಚಿತವಾಗಿ ಭರತ್ ರಾಜ್ , ಪ್ರಜ್ನಾರಿಂದ ಒಂದು ಲಕ್ಷ ಹಣವನ್ನು ಪಡೆದುಕೊಂಡಿದ್ದು, ಇನ್ನೂ ಹೆಚ್ಚಿನ ಹಣದ ಬಗ್ಗೆ ಬೇಡಿಕೆ ಇಡುತ್ತಿದ್ದರು ,ಮದುವೆಯ ದಿನದಿಂದ ಹಿಡಿದು ಪ್ರತೀ ದಿನ ಹೆಚ್ಚಿನ ಹಣದ ಬೇಡಿಕೆ ಇಡುತ್ತಿದ್ದು, ಸರಿಯಾಗಿ ಸಂಸಾರ ಮಾಡದೇ ಇದ್ದು ಇಬ್ಬರ ಮಧ್ಯೆ ಮನಸ್ತಾಪ ಹೆಚ್ಚಾಗಿತ್ತು ಎಂದು ಪ್ರಜ್ನಾರವರು ದೂರಿಕೊಂಡಿದ್ದಾರೆ.
ಪ್ರಜ್ನಾರವರ ಮಾವ ಸದಾನಂದರವರು ಕೂಡಾ ಹಣಕ್ಕಾಗಿ ಬೇಡಿಕೆ ಇಟ್ಟು, ಹಣ ತರದೇ ಇದ್ದಲ್ಲಿ ಮಗನಿಗೆ ಬೇರೆ ಮದುವೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರು ಎಂದು ದೂರಲಾಗಿದೆ. ಅತ್ತೆ ಪ್ರಭಾವತಿ ಮತ್ತು ನಾದಿನಿ ಭಾರತಿ ಕೂಡಾ ಪ್ರಜ್ನಾರವರಿಗೆ ಕೆಲಸ ಬಿಡು, ತವರು ಮನೆಗೆ ಹೋಗಬಾರದು. ಮನೆಯಲ್ಲಿ ನಡೆದ ವಿಷಯವನ್ನು ಅವರಿಗೆ ಹೇಳಬಾರದು ಎಂದೆಲ್ಲಾ ಬೈಯುತ್ತಿದ್ದರು. ನಂತರ ಪ್ರಜ್ನಾರವರ ತಂದೆ ಇವರಿಬ್ಬರಿಗೆ ಹಿರಿಯಡ್ಕದಲ್ಲಿ ಬೇರೆಯೇ ಬಾಡಿಗೆ ಮನೆಯನ್ನು ಮಾಡಿಕೊಟ್ಟಿದ್ದು, ಅಲ್ಲಿ ಕೂಡಾ ಭರತ್ ರಾಜ್ ನು ಪ್ರಜ್ನಾರೊಂದಿಗೆ ಗಲಾಟೆ ಮಾಡಿ ಹೊಡೆದಿರುತ್ತಾನೆ. ಅಲ್ಲದೆ ಪ್ರಜ್ನಾರ ಚಿಕ್ಕಪ್ಪ ನೊಂದಿಗೆ ಸಂಬಂಧ ಕಲ್ಪಿಸಿ ಬೈದಿರುತ್ತಾನೆ. ಕೊಕ್ಕರ್ಣೆಯಿಂದ ಬೆಳುವಾಯಿಗೆ ಕೆಲಸಕ್ಕೆ ಕಳುಹಿಸಿ, ಪ್ರತೀದಿನವೂ ನಿನ್ನ ಸಂಬಳದ ಹಣಕೊಡು. ತಂದೆಯವರ ನಿವೃತ್ತಿಯ ಹಣ ತಂದು ಕೊಡೆಂದು ಎಲ್ಲರೂ ಪೀಡಿಸುತ್ತಿದ್ದರು ಎಂದು ದೂರಿದ್ದಾರೆ, ಅಲ್ಲದೆ ದಿನಾಂಕ:31-08-2022 ರಂದು ಸಂಜೆ 5.00 ಗಂಟೆಗೆ ಕೊಕ್ಕರ್ಣೆಯ ಗಣೇಶ ಉತ್ಸವಕ್ಕೆ ಹೋಗಿ ಬಂದ ನಂತರ ಪ್ರಜ್ನಾರಿಗೆ ಇನ್ನು ಎಲ್ಲಿಗೂ ಹೋಗಬಾರದೆಂದು ಎಲ್ಲರೂ ಒಟ್ಟಾಗಿ ಬೈದಿದ್ದು, ಅದೇ ದಿನ ರಾತ್ರಿ ಸುಮಾರು 10.15 ಗಂಟೆಗೆ ಪ್ರಜ್ನಾರವರು ರೂಮಿನಲ್ಲಿ ಮಲಗಿರುವಾಗ, ಭರತ್ ರಾಜ್ ನು ರೂಮಿನ ಬಾಗಿಲನ್ನು ಹಾಕದೇ ಒಳಗೆ ಬಂದು ಮಲಗಿದಾಗ, ಪ್ರಜ್ನಾರವರು ರೂಮಿನ ಬಾಗಿಲು ಹಾಕಿ ಎಂದು ಹೇಳಿದ್ದಕ್ಕೆ ಮಾವ ಸದಾನಂದ,ಅತ್ತೆ ಪ್ರಭಾವತಿ ರೂಮಿನೊಳಗೆ ಬಂದಿದ್ದು ,ಭರತ್ ರಾಜ್ ನು ಕೋಲಿನಿಂದ ಪ್ರಜ್ನಾರಿಗೆ ಹೊಡೆದು, ಕೊಲೆ ಮಾಡುವ ಉದ್ದೇಶದಿಂದ ಕುತ್ತಿಗೆಯನ್ನು ಎರಡೂ ಕೈಗಳಿಂದ ಜೋರಾಗಿ ಒತ್ತಿ ಹಿಡಿದು ಉಸಿರಾಡದಂತೆ ಮಾಡಿ , ಮಾವ ಸದಾನಂದ ಪ್ರಜ್ನಾರ ಸೊಂಟದ ಮೇಲೆ ಕುಳಿತು ಜುಟ್ಟನ್ನು ಹಿಡಿದು ಅವಳನ್ನು ಸಾಯಿಸು ಎಂದು ಕೂಗಿ ಹೇಳುತ್ತಿದ್ದು, ಅತ್ತೆ ಪ್ರಭಾವತಿ ಕೂಡಾ ಪ್ರಜ್ನಾರವರಿಗೆ ಕಾಲಿನಿಂದ ತುಳಿದು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿ, ಎಲ್ಲರೂ ಒಟ್ಟಾಗಿ ನಿನ್ನನ್ನು ಇವತ್ತೇ ಮುಗಿಸಿ ಬಿಡುತ್ತೇವೆ ಎಂದು ಹೇಳಿರುತ್ತಾರೆ ಎಂದು ದೂರಿದ್ದಾರೆ. ಅಲ್ಲದೇ ಘಟನೆಯ ವೇಳೆ ಭರತ್ ರಾಜ್ ನು ಪ್ರಜ್ನಾರವರ ಚಲನವಲನಗಳನ್ನು ವೀಡಿಯೋ ಚಿತ್ರೀಕರಣ ಮಾಡಿದ್ದು. ಎಲ್ಲರೂ ಸಮಾನ ಉದ್ದೇಶದಿಂದ ಕಳೆದ 9 ತಿಂಗಳಿನಿಂದಲೂ ಪ್ರಜ್ನಾರಿಗೆ ವಿಪರೀತ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿರುತ್ತಾರೆ ಎಂದು ದೂರಿದ್ದಾರೆ. ಈ ಎಲ್ಲಾ ಘಟನೆಗಳಿಗೂ ಜಯಕುಮಾರ್ ,ನವಮಿ ,ನಿಹಾಲ್ ,ರತ್ನಾಕರ ಇವರು ಕುಮ್ಮಕ್ಕು ನೀಡಿರುತ್ತಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ . ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.