ಮಣಿಪಾಲ: ಆಗಸ್ಟ್ 8 (ಹಾಯ್ ಉಡುಪಿ ನ್ಯೂಸ್ ) ಮನೆಯ ಆವರಣದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಕಳ್ಳರು ಕದ್ದೊಯ್ದ ಘಟನೆ ಮಣಿಪಾಲದಲ್ಲಿ ನಡೆದಿದೆ.
ಮಣಿಪಾಲ , ವಿ.ಪಿ.ನಗರ 3ನೇ ಕ್ರಾಸ್ ನೂಮಾ ಅಪಾರ್ಟ್ ಮೆಂಟ್ ನಿವಾಸಿ ಸೈಯದ್ ಅಜರ್ (52) ದಿನಾಂಕ 7-08-2022 ರಂದು ರಾತ್ರಿ ಕೆಲಸ ಮುಗಿಸಿಕೊಂಡು ತಮ್ಮ KA 20 ES 1703 TVS Acces ಸ್ಕೂಟರನ್ನು ರಾತ್ರಿ ಸುಮಾರು 9.30 ಗಂಟೆಗೆ ಮನೆಯ ಕಾಂಪೌಂಡ್ ಒಳಗಡೆ ನಿಲ್ಲಿಸಿದ್ದು. ಇಂದು ಬೆಳಗಿನ ಜಾವ 05.00 ಗಂಟೆಗೆ ಮನೆಯ ಹೊರಗಡೆ ಬಂದು ನೋಡಿದಾಗ ಸ್ಕೂಟರ್ ಅಲ್ಲಿ ಇಲ್ಲದೇ ಇದ್ದು, ಸ್ಕೂಟರನ್ನು ಯಾರೋ ಕಳ್ಳರು ಕಳ್ಳತನ ಮಾಡಿದ್ದು ಕಳವಾದ ಸ್ಕೂಟರ್ ನ ಮೌಲ್ಯ 50000 ಆಗಿರುತ್ತದೆ ಎಂದು , ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.