Spread the love

ಕಾಪು: ಆಗಸ್ಟ್ ೮ (ಹಾಯ್ ಉಡುಪಿ ನ್ಯೂಸ್) ಮಲ್ಲಾರು ದೇವಸ್ಥಾನದ ಬೀಗ ಮುರಿದು ಹುಂಡಿಗಳನ್ನು ಕಳ್ಳರು ಕದ್ದು‌ ಒಯ್ದಿರುವ ಬಗ್ಗೆ ದೂರು ದಾಖಲಾಗಿದೆ.

ಕಾಪು ಹೋಬಳಿ, ಕಾಪು ತಾಲೂಕು ಕಂದಾಯ ನಿರೀಕ್ಷಕರಾದ ಸುಧೀರ್ ಕುಮಾರ್ ಶೆಟ್ಟಿ ಇವರು ಕಾಪು ತಾಲೂಕು, ಮಲ್ಲಾರು ಗ್ರಾಮದಲ್ಲಿರುವ ಮುಜುರಾಯಿ ಇಲಾಖೆಗೆ ಒಳಪಟ್ಟ ಶ್ರೀ ಲಕ್ಷ್ಮೀ ಜನಾರ್ಧನ ದೇವಸ್ಥಾನದ ಕಾರ್ಯ ನಿರ್ವಾಹಣಾಧಿಕಾರಿಯಾಗಿ ಕೆಲಸ ಮಾಡಿಕೊಂಡಿರುತ್ತಾರೆ.

ದಿನಾಂಕ:07-08-2022 ರಂದು ಬೆಳಿಗ್ಗೆ 6:00 ಗಂಟೆಗೆ ದೇವಸ್ಥಾನದ ಸಿಬ್ಬಂದಿಗಳಾದ ದಿವಾಕರ್ ಮತ್ತು ಲಕ್ಷ್ಮೀಕಾಂತ್ ರವರು ಸುಧೀರ್ ಕುಮಾರ್ ಶೆಟ್ಟಿಯವರಿಗೆ ಕರೆ ಮಾಡಿ ದೇವಸ್ಥಾನದಲ್ಲಿ 3 ಹುಂಡಿಗಳು ಕಾಣುತ್ತಿಲ್ಲವಾಗಿ ಮಾಹಿತಿ ನೀಡಿದ್ದು, ಸುಧೀರ್ ಕುಮಾರ್ ಶೆಟ್ಟಿ ಯವರು ಕೂಡಲೇ ದೇವಸ್ಥಾನಕ್ಕೆ ಹೋಗಿ ಪರಿಶೀಲಿಸಿದಾಗ ಹುಂಡಿ ಡಬ್ಬಗಳು ಕಾಣೆಯಾಗಿರುವುದು ಕಂಡುಬಂದಿರುತ್ತದೆ.

ನಂತರ ದೇವಸ್ಥಾನದ ಪರಿಸರದಲ್ಲಿ ಪರಿಶೀಲಿಸಿದಾಗ ದೇವಸ್ಥಾನದ ಎದುರಿನ ಮೈದಾನದಲ್ಲಿ 3 ಹುಂಡಿಗಳು ಬಿದ್ದಿದ್ದು, ಅವುಗಳಲ್ಲಿ ಕೆಲವು ಕಾಯಿನ್ ಹಾಗೂ ನೋಟುಗಳು ಇರುವುದು ಕಂಡುಬಂದಿರುತ್ತದೆ ಎನ್ನಲಾಗಿದೆ.  ಈ ಬಗ್ಗೆ ದೇವಸ್ಥಾನದ ಸೆಕ್ಯೂರಿಟಿಯಾದ ಹನುಮಂತ ರವರಲ್ಲಿ ವಿಚಾರಿಸಲಾಗಿ ತಾನು ಬೆಳಗಿನ ಜಾವ 3 ಗಂಟೆಯವರೆಗೂ ದೇವಸ್ಥಾನದ ಸುತ್ತಲೂ ತಿರುಗಾಡಿಕೊಂಡು, ಆ ಬಳಿಕ ವಿಶ್ರಾಂತಿಗಾಗಿ ದೇವಸ್ಥಾನದ ಮುಂದೆ ಇರುವ ಜಗುಲಿಯಲ್ಲಿ ಕುಳಿತುಕೊಂಡಿದ್ದು, ಪುನಃ ಬೆಳಗಿನ ಜಾವ 4:30 ಗಂಟೆಗೆ ಎದ್ದು ದೇವಸ್ಥಾನದ ಒಳಗೆ ತಿರುಗಾಡುತ್ತಿರುವಾಗ ದೇವಸ್ಥಾನದ ಒಳಗಿದ್ದ 3 ಕಾಣಿಕೆ ಹುಂಡಿಗಳು ಕೂಡಾ ಕಾಣುತ್ತಿರಲಿಲ್ಲ ಎಂಬುದಾಗಿ ತಿಳಿಸಿರುತ್ತಾರೆ ಎನ್ನಲಾಗಿದೆ. ಯಾರೋ ಕಳ್ಳರು ದೇವಸ್ಥಾನದ ಪ್ರಾಂಗಣದ ಮುಖ್ಯ ದ್ವಾರದ ಬೀಗವನ್ನು ಒಡೆದು ಒಳ ಪ್ರವೇಶಿಸಿ ಹುಂಡಿಗಳಲ್ಲಿನ ಹಣ ಕಳವು ಮಾಡಲು ಪ್ರಯತ್ನಿಸಿ ಸ್ವಲ್ಪದಷ್ಟು ಹಣವನ್ನು ತೆಗೆದುಕೊಂಡು ಉಳಿದ ಹಣವನ್ನು ಹುಂಡಿ ಸಮೇತ ದೇವಸ್ಥಾನದ ಮುಂಬಾಗದ ಮೈದಾನದಲ್ಲಿ ಬಿಟ್ಟು ಹೋಗಿರುತ್ತಾರೆ.

ಹುಂಡಿಗಳಲ್ಲಿ ಎಷ್ಟು ಹಣವಿತ್ತು ಎಂದು ತಿಳಿದಿರುವುದಿಲ್ಲ ಎಂದು ಕಾಪು ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಈ ಬಗ್ಗೆ ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

error: No Copying!